ಶನಿವಾರಸಂತೆ, ಸೆ. 12: ಆಲೂರು-ಸಿದ್ದಾಪುರ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಹಾಗೂ ಆಲೂರು ಸಿದ್ದಾಪುರ ಗ್ರಾಮಗಳಲ್ಲಿರುವ ಜೇನುಕುರುಬರ ಜನಾಂಗದವರಿಗೆ ಐಟಿಡಿಪಿ ಇಲಾಖೆಯಿಂದ ಪೂರಕ ಪೌಷ್ಟಿಕ ಆಹಾರದ ಚೀಲಗಳನ್ನು ವಿತರಿಸಲಾಯಿತು.
ಮಾಲಂಬಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ವಿತರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ತೀರ್ಥಕುಮಾರ್ ಮಾತನಾಡಿ, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ದಿಸೆಯಲ್ಲಿ ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿ ಶಾಲೆಗೆ ತಪ್ಪದೇ ಕಳುಹಿಸಬೇಕು ಎಂದರು.
ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾರಮೇಶ್, ಮಾಜಿ ಸದಸ್ಯರಾದ ಲೀಲಾದಾಸ್, ಮುತ್ತಮ್ಮ, ಅಂಗನವಾಡಿ ಕಾರ್ಯಕರ್ತೆ ವೇದಕುಮಾರಿ ಇತರರು ಉಪಸ್ಥಿತರಿದ್ದರು.