ಕುಶಾಲನಗರ, ಸೆ. 14: ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಸೋಮವಾರಪೇಟೆ ಕಛೇರಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಅಲ್ಲಿನ ಮಹಿಳಾ ಮೇಲ್ವಿಚಾರಕಿಯೊಬ್ಬರು ಕಿರುಕುಳ ನೀಡುತ್ತಿರುವ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಮಹಾಮಂಡಲದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆÀ ಡಾ. ಜಯಮಾಲ ಅವರಿಗೆ ದೂರು ಸಲ್ಲಿಸಿದ್ದಾರೆ. ಸಂಘದ ಪದಾಧಿಕಾರಿಗಳಾದ ಭಾಗೀರಥಿ, ಸುವರ್ಣ, ಸಾವಿತ್ರಿ, ಫಿಲೋಮಿನಾ, ಜಮುನಾ, ಶಾರದಾ ಮತ್ತು ಕೆ.ಬಿ. ಮುತ್ತಮ್ಮ ಮತ್ತಿತರರು ಮನವಿ ಸಲ್ಲಿಸಿದ್ದು ಮಹಿಳಾ ಮೇಲ್ವಿಚಾರಕಿ ನೂತನವಾಗಿ ಸೇರ್ಪಡೆಯಾಗುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಹಣಕ್ಕೆ ಒತ್ತಾಯ ಹಾಗೂ ಕಾರ್ಯಕರ್ತೆಯರಿಗೆ ಎಲ್‍ಐಸಿ ಪಾಲಿಸಿ ಮಾಡಿಸಲು ಒತ್ತಾಯ ಮಾಡುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದು ಇದಕ್ಕೆ ಇಲಾಖೆಯ ಹಿರಿಯ ಅಧಿಕಾರಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.