ಆಲೂರು-ಸಿದ್ದಾಪುರ, ಸೆ. 14: ಗೌರಿ ಹಬ್ಬದ ಪ್ರಯುಕ್ತ ಶನಿವಾರಸಂತೆ ವ್ಯಾಪ್ತಿಯ ವಿವಿಧ ಸೇವಾ ಸಮಿತಿ ವತಿಯಿಂದ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಿವಿಧ ಸೇವಾ ಸಮಿತಿಗಳು ಈಗಾಗಲೇ ಕೊಡಗು ಜಲಪ್ರಳಯದಿಂದ ಸಂತ್ರಸ್ತವಾಗಿರುವ ಹಿನೆÀ್ನಲೆಯಲ್ಲಿ ಈ ಬಾರಿ ಗೌರಿ- ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ಣಯಿಸಿದ್ದು, ಸಂಪ್ರದಾಯ ಪ್ರಕಾರದಂತೆ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಗೌರಿ ಹಬ್ಬದ ಪ್ರಯುಕ್ತ ಗೌರಿ ಮೂರ್ತಿಯನ್ನು ಸೇವಾ ಸಮಿತಿ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಆಲೂರು-ಸಿದ್ದಾಪುರ, ಮಾಲಂಬಿ, ಕಣಿವೆಬಸವನಹಳ್ಳಿ, ಮುಳ್ಳೂರು, ನಿಡ್ತ, ಗೋಪಾಲಪುರ, ಒಡೆಯನಪುರ, ಹೆಮ್ಮನೆ, ದುಂಡಳ್ಳಿ ಮುಂತಾದ ಗ್ರಾಮಗಳ ವಿವಿಧ ಸೇವಾ ಸಮಿತಿ ಸೇರಿದಂತೆ ಪಟ್ಟಣದ ಗಣಪತಿ ದೇವಾಲಯ, ತ್ಯಾಗರಾಜ ಕಾಲೋನಿಯ ವಿವಿಧ ವಿನಾಯಕ ಸೇವಾ ಸಮಿತಿ ವತಿಯಿಂದ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸ ಲಾಯಿತು. ಈ ಸಂದರ್ಭ ಗೌರಿ ಮೂರ್ತಿಗೆ ಗಂಗಾ ಪೂಜೆ ಸಲ್ಲಿಸಿ ವೇದಿಕೆಗೆ ಮೆರವಣಿಗೆ ಮೂಲಕ ಕರೆತಂದು ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸೇವಾ ಸಮಿತಿಯವರು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಾರಿ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಿದ ಮೂರ್ತಿಗಳು ಪರಿಸರ ಸ್ನೇಹಿ ವಿಗ್ರಹಗಳಾಗಿರುವದು ವಿಶೇಷವಾಗಿದೆ.