ಮಡಿಕೇರಿ, ಸೆ. 14: ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಅಧ್ಯಕ್ಷ ಲ. ಇ.ವಿ. ಪ್ರಶಾಂತ್ ನೇತೃತ್ವದಲ್ಲಿ ಲ. ಡಾ. ಸದಾನಂದ ನಾಯಕ್ ಅವರ ಸಹಕಾರದೊಂದಿಗೆ ಕೊಡಗು ಅತಿವೃಷ್ಟಿ ಮತ್ತು ಗುಡ್ಡ ಕುಸಿದು ಕಲ್ಲುಗುಂಡಿ ಮತ್ತು ಸಂಪಾಜೆ ನಿರಾಶ್ರಿತ ಕೇಂದ್ರದಲ್ಲಿರುವ ಜೊಡುಪಾಲ ನಿವಾಸಿಗಳಿಗೆ ದಿನಸಿ ಮತ್ತು ದೈನಂದಿನ ಉಪಯೋಗ ವಸ್ತುಗಳನ್ನು ನೀಡಲಾಯಿತು.ಈ ಸಂದರ್ಭ ಲಯನ್ಸ್ ಕ್ಲಬ್‍ನ ಸದಸ್ಯರಾದ ಲ. ವಾಸುದೇವ ಕಟ್ಟೆಮನೆ, ಲ. ನಳಿನಿ ಕಿಶೋರ್, ಲ. ಕಿಶೋರ್ ಪಿ.ಬಿ., ಲ. ಸಿಲ್ವೆಸ್ಟರ್ ಡಿಸೋಜ, ಲ. ಅಮೃತ ಅಪ್ಪಣ್ಣ, ಮತ್ತು ಲ. ಧನು ನವೀನಚಂದ್ರ ಮುಂತಾದವರು ಸಹಕರಿಸಿದರು.