ಮಡಿಕೇರಿ, ಸೆ. 12: ಮಡಿಕೇರಿ ಕೊಡವ ಸಮಾಜದ ಅಧೀನದಲ್ಲಿ ಬರುವ ಕೊಡಗು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಂಸ್ಥೆ ಮುಂದೂಡಲ್ಪಟ್ಟಿದ್ದ ವಾರ್ಷಿಕ ಮಹಾಸಭೆ ತಾ. 15ರ ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ.

ಈ ಸಹಕಾರ ಸಂಸ್ಥೆಯ 14ನೇ ವಾರ್ಷಿಕ ಮಹಾಸಭೆ ಇದಾಗಿದ್ದು, ಆಗಸ್ಟ್ 26ರಂದು ನಿಗದಿಯಾಗಿತ್ತು. ಆದರೆ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಿಂದ ಇದನ್ನು ಮುಂದೂಡಲಾಗಿದ್ದು, ಇದೀಗ ತಾ. 15ರಂದು ನಿಗದಿಪಡಿಸಲಾಗಿದೆ. ಸಂಘದ ಅಧ್ಯಕ್ಷ ಚೋವಂಡ ಡಿ. ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ವ್ಯವಸ್ಥಾಪಕಿ ಚೋಂದಮ್ಮ ಅವರು ತಿಳಿಸಿದ್ದಾರೆ.