*ಗೋಣಿಕೊಪ್ಪಲು, ಸೆ. 12: ಹೆಬ್ಬಲಸಿನ ಮರದ ನಾಟಾಗಳನ್ನು ಸಾಗಿಸುತ್ತಿದ್ದ ವೇಳೆ ಧಾಳಿ ನಡೆಸಿದ ಅರಣ್ಯ ಇಲಾಖೆಯವರು ನಾಟಾಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿರುವ ಘಟನೆ ಬಿರುನಾಣಿಯಲ್ಲಿ ಜರುಗಿದೆ.
ಬಿರುನಾಣಿಯ ನಾಚಪ್ಪ ಅವರ ಕಾಫಿ ತೋಟದ ಕಣದಲ್ಲಿ ಅಂದಾಜು ರೂ. 20 ಲಕ್ಷ ಮೌಲ್ಯದ 150 ಹೆಬ್ಬಲಸಿನ ನಾಟಾವನ್ನು ಕಡಿದು ಸಂಗ್ರಹಿಸಿದ್ದರು ಎನ್ನಲಾಗಿದೆ. ದೊರೆತ ಖಚಿತ ಸುಳಿವಿನ ಮೇರೆಗೆ ಧಾಳಿ ನಡೆಸಿದ ತಿತಿಮತಿ ಡಿಸಿಎಫ್ ಮರಿಯಾ ಕ್ರಿಸ್ತರಾಜ್, ಎಸಿಎಫ್ ಶ್ರೀಪತಿಯರ ನೇತೃತ್ವದ ತಂಡದವರು ಮರ ಸಾಗಿಸಲು ಬಳಸಿದ್ದ ಒಂದು ಲಾರಿ, ಸ್ವರಾಜ್ ಮಜ್ದಾ, ಕ್ರೇನ್ ಹಾಗೂ ಜೀಪುಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಕ್ರೇನ್ ಆಪರೇಟರ್ ರಾಜು, ವಿಜಯ್, ಥೋಮಸ್ ಹಾಗೂ ತೋಟದ ಮಾಲೀಕ ನಾಚಪ್ಪ ಎಂಬವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಪ್ರಮುಖ ಆರೋಪಿ ಎನ್ನಲಾದ ಧನಂಜಯ ತಲೆ ಮರೆಸಿಕೊಂಡಿದ್ದಾನೆ. ಕಾರ್ಯಾಚರಣೆ ಯಲ್ಲಿ ಪೊನ್ನಂಪೇಟೆ ಎಸಿಎಫ್ ಗಂಗಾಧರ್, ವನಪಾಲಕ ಮೂರ್ತಿ, ಸಿಬ್ಬಂದಿಗಳಾದ ರಾಕೇಶ್, ಸಂಜಯ್, ಚೇತನ್ ಹಾಗೂ ಆರ್ಆರ್ಟಿ ಪಾಲ್ಗೊಂಡಿದ್ದರು.
ವರದಿ : ಎನ್.ಎನ್.ದಿನೇಶ್