*ಗೋಣಿಕೊಪ್ಪ, ಸೆ.15: ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿ ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾಸಂಸ್ಥೆಯಲ್ಲಿ ಆಶ್ರಯ ಪಡೆದ 130 ವಿದ್ಯಾರ್ಥಿಗಳಿಗೆ ನಲ್ಲೂರು ಗ್ರಾಮದ ಸರಸ್ವತಿ ಯೂತ್ ಕ್ಲಬ್ ವತಿಯಿಂದ ಸಮವಸ್ತ್ರ ನೀಡಲಾಯಿತು.
ಸಾಯಿಶಂಕರ್ ವಿದ್ಯಾಸಂಸ್ಥೆ ಯಲ್ಲಿ ಕ್ಲಬ್ನ ಅಧ್ಯಕ್ಷ ಪಿ.ಕೆ. ರಾಜ ಹಾಗೂ ರೈತ ಸಂಘದ ಪ್ರಮುಖ ಸುಜಯ್ ಬೋಪಯ್ಯ ಅವರ ನೇತೃತ್ವದಲ್ಲಿ 1 ಲಕ್ಷದ 8 ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಮವಸ್ತ್ರವನ್ನು ವಿತರಿಸಿದರು.
ನೆರೆ ಸಂಕಷ್ಟಕ್ಕೆ ಸಿಲುಕಿ ವಿಧ್ಯಾರ್ಥಿಗಳ ಬದುಕು ಅತಂತ್ರವಾಗಿದೆ ಇವರಿಗೆ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಸಾಯಿಶಂಕರ್ ವಿದ್ಯಾಸಂಸ್ಥೆ ಮುಂದಾಗಿದೆ. 130 ವಿದ್ಯಾರ್ಥಿ ಗಳಿಗೆ ಆಶ್ರಯ ನೀಡಿ ವಿದ್ಯಾರ್ಜ ನೆಯ ಸೇವೆಗೆ ಕ್ರಮ ಕೈಗೊಂಡಿರುವದು ಶ್ಲಾಘನೀಯ ಎಂದು ಸುಜಯ್ ಬೊಪಯ್ಯ ಹೇಳಿದರು.
ಕ್ಲಬ್ನ ಉಪಾಧ್ಯಕ್ಷ ಎಂ. ಪಿ. ಹರೀಶ್, ಕಾರ್ಯದರ್ಶಿ ಟಿ.ಸಿ. ಅರುಣ, ಸದಸ್ಯರುಗಳಾದ ಪಿ.ಎಂ. ರಾಜ, ಪಿ.ಪಿ. ಸತೀಶ್, ಸುರೇಶ್, ಎಂ.ಜಿ. ಗಿರೀಶ್, ಎಂ. ಎನ್. ಅಶೋಕ್, ಅನಿಲ್ ಸೇರಿದಂತೆ ಶಾಲಾ ಮುಖ್ಯೋಪಾಧ್ಯಾಯಿನಿ, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.