ಮಡಿಕೇರಿ, ಸೆ. 15 : ಕುಶಾಲನಗರ-ಸೋಮವಾರಪೇಟೆ ವಿದ್ಯುತ್ ಮಾರ್ಗದ ತುರ್ತು ನಿರ್ವಹಣೆ ಹಾಗೂ ಕಾಮಗಾರಿ ನಿರ್ವಹಿಸಬೇಕಿರುವದರಿಂದ ತಾ. 16 ರಂದು (ಇಂದು) ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಆದ್ದರಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಚೌಡ್ಲು, ಐಗೂರು, ಕಿರಗಂದೂರು ಪಂಚಾಯಿತಿ, ಬೇಳೂರು, ನೆರುಗಳಲೆ, ಐಗೂರು, ಶಾಂತಳ್ಳಿ, ಎಡೂರು, ತಾಕೇರಿ, ಬೆಟ್ಟದಹಳ್ಳಿ, ಹಾನಗಲ್ಲು, ತೋಳೂರು ಶೆಟ್ಟಳ್ಳಿ ಮತ್ತು ಕೂತಿ, ಜಕ್ಕನಳ್ಳಿ, ದೊಡ್ಡಮಳ್ತೆ ಪಂಚಾಯಿತಿ, ಕೊತನಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ ಅಬ್ಬೂರುಕಟ್ಟೆ, ಐಗೂರು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ ಕೋರಿದ್ದಾರೆ.