ಮಡಿಕೇರಿ, ಸೆ. 15: ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸಬೇಕಾಗುವದರಿಂದ ಕ.ವಿ.ಪ್ರ.ನಿ.ನಿ.ರವರ ಕೋರಿಕೆಯಂತೆ ತಾ. 18 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 66/11ಕೆವಿ ಪೊನ್ನಂಪೇಟೆ, 66/11ಕೆವಿ ವೀರಾಜಪೇಟೆ, 33/11ಕೆವಿ ಶ್ರೀಮಂಗಲ, 33/11ಕೆವಿ ಸಿದ್ದಾಪುರ ಹಾಗೂ 33/11ಕೆವಿ ಮೂರ್ನಾಡು ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಅದ್ದರಿಂದ ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ ವೀರಾಜಪೇಟೆ, ಬಿ. ಶೆಟ್ಟಗೇರಿ, ಬೇತ್ರಿ, ಕಡಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲಿ ್ಲವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.