ಮಡಿಕೇರಿ, ಸೆ. 20: ವೀರಾಜಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್‍ನ ವೈದ್ಯರು ತಾ. 25 ರಿಂದ 29 ರವರೆಗೆ ಲಭ್ಯವಿರುವದಿಲ್ಲ. ಮಾಜಿ ಸೈನಿಕರು ಈ ಅವಧಿಯಲ್ಲಿ ತುರ್ತು ಸೇವೆಗಾಗಿ ಮಡಿಕೇರಿ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ಸೇವೆ ಪಡೆದುಕೊಳ್ಳ ಬಹುದು. ರೋಟೀನ್ ಔಷಧಿಯನ್ನು ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ವೀರಾಜಪೇಟೆಯಿಂದ ಪಡೆದು ಕೊಳ್ಳಬಹುದಾಗಿ ಇ.ಸಿ.ಹೆಚ್.ಎಸ್. ಪ್ರಕಟಣೆ ತಿಳಿಸಿದೆ.