ರಸ್ತೆ ಗುಂಡಿ : ಹೈ ಕೋರ್ಟ್ ಅಸಮಾಧಾನ

ಬೆಂಗಳೂರು, ಸೆ. 20: ಬೆಂಗಳೂರನ್ನು ತಾ. 24 ರೊಳಗಾಗಿ ಗುಂಡಿ ಮುಕ್ತ ನಗರವಾಗಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ. ವಿಚಾರಣೆ ವೇಳೆ ನಗರ 8 ಪ್ರದೇಶಗಳಲ್ಲಿ 898 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ 2,172 ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‍ಜಿ ಪಂಡಿತ್ ಅವರಿದ್ದ ಪೀಠ ಪ್ರತಿಕ್ರಿಯೆ ನೀಡಿ, ತಾ. 24 ರೊಳಗಾಗಿ ನಗರವನ್ನು ಗುಂಡಿ ಮುಕ್ತ ನಗರವಾಗಿಸುವಂತೆ ಆದೇಶಿಸಿದ್ದಾರೆ. ನಿನ್ನೆ ನಡೆದ ವಿಚಾರಣೆ ವೇಳೆ ಬಿಬಿಎಂಪಿಗೆ ನ್ಯಾಯಾಲಯ ಮೌಖಿಕವಾಗಿ ಆದೇಶ ನೀಡಿ, ಗುರುವಾರದೊಳಗಾಗಿ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿತ್ತು. ಈ ಕುರಿತಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದ ಬಿಬಿಎಂಪಿ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿತ್ತು.

ಆಸ್ಪತ್ರೆಯಲ್ಲಿ ಡಿಕೆಶಿ ಭೇಟಿ ಮಾಡಿದ ಸಿಎಂ

ಬೆಂಗಳೂರು, ಸೆ. 20: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ ದಿಢೀರ್ ಅಪೆÇೀಲೊ ಆಸ್ಪತ್ರೆಗೆ ಭೇಟಿ ನೀಡಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ಆರೋಗ್ಯ ವಿಚಾರಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲೇ ಇದ್ದ ಸಿಎಂ, ಡಿಕೆಶಿ ಜತೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತೂ ಚರ್ಚೆ ನಡೆಸಿದ್ದಾರೆ. ನಾವು ಸ್ವಲ್ಪ ಯಾಮಾರಿದರೂ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ. ಬಿಜೆಪಿ ಸರ್ಕಾರವನ್ನು ಬೀಳಿಸಲು ನಿರಂತರ ಪ್ರಯತ್ನ ನಡೆಸುತ್ತಿದೆ. ನಮ್ಮ ಸರ್ಕಾರದ ಹಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಯಾವದೇ ಕಾರಣಕ್ಕೂ ನಾವು ಯಾಮಾರಬಾರದು ಎಂದು ಡಿಕೆಶಿಗೆ ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿರುವ ಎಫ್‍ಐಆರ್ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು. ವಿಚಾರಣೆ ಹೆಸರಲ್ಲಿ ಇಡಿ ಅಧಿಕಾರಿಗಳು ವಿನಾಕಾರಣ ಟಾರ್ಚರ್ ಕೊಡುತ್ತಾರೆ ಎಂದು ಡಿಕೆಶಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೆಚ್‍ಡಿಕೆ ನೀವು ಯಾವದಕ್ಕೂ ಹೆದರಬೇಡಿ, ನಿಮ್ಮ ಜತೆ ನಾವಿದ್ದೇವೆ. ಕಾನೂನು ಹೋರಾಟವನ್ನು ಸ್ಟ್ರಾಂಗ್ ಮಾಡಿ, ಎಲ್ಲವೂ ಸರಿಯಾಗುತ್ತದೆ. ನಾವು ಇದಕ್ಕೆ ಕೌಂಟರ್ ಕೊಡಲು ಪ್ಲ್ಯಾನ್ ಮಾಡೋಣ ಎಂದು ಧೈರ್ಯ ತುಂಬಿದರು ಎನ್ನಲಾಗಿದೆ.

ಉಳಿತಾಯ ಯೋಜನೆ : ಬಡ್ಡಿ ಏರಿಕೆ

ನವದೆಹಲಿ, ಸೆ. 20: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರದಲ್ಲಿ ಅಲ್ಪ ಏರಿಕೆ ಮಾಡಿದೆ. ಈ ಬಗ್ಗೆ ಇಂದು ನಡೆದ ಸಭೆಯಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪತ್ರ (ಎನ್‍ಎಸ್‍ಸಿ) ಸೇರಿದಂತೆ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿ ದರದಲ್ಲಿ ಶೇ 0.4 ರಷ್ಟು ಏರಿಕೆ ಮಾಡಲಾಗಿದೆ. ಐದು ವರ್ಷಗಳ ನಿಶ್ಚಿತ ಠೇವಣಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಖಾತೆಗಳ ಬಡ್ಡಿ ದರವು ಶೇ 7.8, 8.7 ಮತ್ತು 7.3ಕ್ಕೆ ಏರಿಕೆಯಾಗಿದ್ದು, ಹಿರಿಯ ನಾಗರಿಕರ ಉಳಿತಾಯ ಠೇವಣಿಗೆ ತ್ರೈಮಾಸಿಕವಾಗಿ ಬಡ್ಡಿ ಪಾವತಿಯಾಗುತ್ತದೆ. ಅಂತೆಯೇ ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರವು ವಾರ್ಷಿಕವಾಗಿ ಮತ್ತೆ ಶೇ 4ಕ್ಕೆ ಮರಳಿದೆ. ಪಿಪಿಎಫ್ಮತ್ತು ಎನ್‍ಎಸ್ಸಿ ವಾರ್ಷಿಕ ಬಡ್ಡಿ ದರ ಶೇ 7.6 ರಿಂದ ಶೇ 8ಕ್ಕೇ ಏರಿಕೆಯಾಗಿದೆ. ಕಿಸಾನ್ ವಿಕಾಸ ಪತ್ರಕ್ಕೆ7.7 ಬಡ್ಡಿ ಜತೆ ಮೆಚ್ಯೂರಿಟಿ ಅವಧಿಯನ್ನು 118 ತಿಂಗಳಿಂದ 112 ತಿಂಗಳುಗಳಿಗೆ ಇಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಖಾತೆಗೆ ಹೆಚ್ಚಿನ ಬಡ್ಡಿದರ ಲಭ್ಯವಾಗಲಿದ್ದು, ಪ್ರಸಕ್ತ ಇರುವ ಬಡ್ಡಿದರಕ್ಕಿಂತ ಶೇ 0.4 ಹೆಚ್ಚು ದೊರೆಯಲಿದೆ. ಒಂದರಿಂದ ಮೂರು ವರ್ಷಗಳ ಅವಧಿಯ ಠೇವಣಿಗೆ ಶೇ 0.3 ರಷ್ಟು ಹೆಚ್ಚಿನ ಬಡ್ಡಿ ದರ ಸಿಗಲಿದೆ ಎಂದು ತಿಳಿದು ಬಂದಿದೆ.

ಬಿಷಪ್ ಫ್ರಾಂಕೊ ಮುಲಕ್ಕಲ್ ಅಮಾನತು

ಕೊಚ್ಚಿ, ಸೆ. 20: ವ್ಯಾಟಿಕನ್, ಕೇರಳದ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಜಲಂಧರ್‍ನ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ತಾತ್ಕಾಲಿಕವಾಗಿ ಹುದ್ದೆಯಿಂದ ತೆರವುಗೊಳಿಸದೆ. ಮುಲಕ್ಕಲ್ ಅವರು, ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಮುಗಿಯುವವರೆಗೆ ತಮ್ಮನ್ನು ಹುದ್ದೆಯಿಂದ ತೆರವುಗೊಳಿಸುವಂತೆ ವ್ಯಾಟಿಕನ್ ಪೆÇೀಪ್ ಫ್ರಾನ್ಸಿಸ್ ಅವರಿಗೆ ಪತ್ರ ಬರೆದಿದ್ದರು. ಮುಲಕ್ಕಲ್ ಮನವಿಯನ್ನು ಪುರಸ್ಕರಿಸಿದ ಪೆÇೀಪ್, ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಅವರ ಸ್ಥಾನಕ್ಕೆ ಬಾಂಬೆಯ ಪ್ರಧಾನ ಬಿಷಪ್ ಅಗ್ನೆಲೊ ರಫಿನೊ ಗ್ರೇಸಿಯಸ್ ಅವರನ್ನು ನೇಮಕ ಮಾಡಲಾಗಿದೆ. ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಲಕ್ಕಲ್ ಅವರು ತಾ. 11 ರಂದು ಪೆÇಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು.

ದಾಖಲೆ ಗೆಲವು ಸಾಧಿಸಿದ ಭಾರತ

ದುಬೈ, ಸೆ. 20: ಭಾರತ ಮತ್ತು ಪಾಕಿಸ್ತಾನ ತಂಡಗಳು ನಡುವಿನ ಪಂದ್ಯಗಳ ಅಂಕಿ ಅಂಶಗಳನ್ನು ಗಮನಿಸಿದರೆ ಇದು ಪಾಕಿಸ್ತಾನದ ವಿರುದ್ಧ ಸಿಕ್ಕ ಅತೀ ದೊಡ್ಡ ಗೆಲವು ಎಂಬದು ತಿಳಿಯುತ್ತದೆ. ಪಂದ್ಯದಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್‍ಗಳ ಅಂತರದ ಭರ್ಜರಿ ಗೆಲವು ದಾಖಲಿಸಿದೆ. ಅಷ್ಟು ಮಾತ್ರವಲ್ಲದೇ ಟೀಮ್ ಇಂಡಿಯಾ ಗೆದ್ದಾಗ ಇನ್ನು 126 ಎಸೆತಗಳು ಬಾಕಿ ಉಳಿದಿತ್ತು. ಚೇಸಿಂಗ್ ವೇಳೆ ಇಷ್ಟು ಪ್ರಮಾಣದ ಎಸೆತಗಳ ಬಾಕಿ ಇರುವಂತೆ ಭಾರತ ಜಯಿಸಿರುವದು ಇದೇ ಮೊದಲು. 2006 ರಲ್ಲಿ ಮುಲ್ತಾನ್‍ನಲ್ಲಿ 105 ಎಸೆತಗಳು ಬಾಕಿ ಉಳಿದಿರುವದು ಈ ಹಿಂದಿನ ಶ್ರೇಷ್ಠ ಸಾಧನೆಯಾಗಿತ್ತು. ಅಂದು ಭಾರತ 162 ರನ್ ಗುರಿ ಬೆನ್ನಟ್ಟಿತ್ತು. ಇನ್ನು 1997ರಲ್ಲಿ ಟೊರಾಂಟೊದಲ್ಲಿ 117 ರನ್ ಗುರಿ ಬೆನ್ನಟ್ಟಿದ ಭಾರತ 105 ಎಸೆತಗಳು ಬಾಕಿ ಉಳಿದಿರುವಂತೆಯೇ ಗುರಿ ಮುಟ್ಟಿತ್ತು. 162 ರನ್‍ಗಳ ಗುರಿ ಹಿಂಬಾಲಿಸಿದ್ದ ಟೀಮ್ ಇಂಡಿಯಾ 29 ಓವರ್‍ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗೆಲವು ದಾಖಲಿಸಿತ್ತು. ಇದೀಗ ಭಾನುವಾರ ನಡೆಯಲಿರುವ ಸೂಪರ್ ಫೆÇೀರ್ ಹಂತದ ಪಂದ್ಯದಲ್ಲೂ ಭಾರತ ಮತ್ತದೇ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.