ಮಡಿಕೇರಿ, ಸೆ. 20: ಮಡಿಕೇರಿ ದಸರಾ ಆಚರಣೆ ಸಂಬಂಧ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿದ್ದ ಪ್ರಮುಖರು, ಇಂದು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರೊಂದಿಗೆ ಚರ್ಚಿಸಿದ್ದು, ಸಚಿವರು ಭಾನುವಾರ ಮಡಿಕೇರಿಗೆ ಆಗಮಿಸುವದರೊಂದಿಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಭೇಟಿ ಇಂದಿನ ರಾಜಕೀಯ ಬೆಳವಣಿಗೆ ನಡುವೆ ಅಸಾಧ್ಯವಾಗಿದ್ದು, ಉಸ್ತುವಾರಿ ಸಚಿವರ ಭರವಸೆ ಮೇರೆಗೆ ರಾಜಧಾನಿಯಿಂದ ಹಿಂತಿರುಗುತ್ತಿರುವದಾಗಿ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ ‘ಶಕ್ತಿ’ ಗೆ ತಿಳಿಸಿದ್ದಾರೆ. ಯಾವ ರೀತಿ ದಸರಾ ನಡೆಸಬಹುದೆಂದು ಭಾನುವಾರ ಸಚಿವರ ಸಮ್ಮುಖ ನಿರ್ಧಾರವಾಗಲಿದೆ ಎಂದು ತಿಳಿಸಿದ ಅವರು, ನಿಯೋಗದಲ್ಲಿ ಶಾಸಕ ಅಪ್ಪಚ್ಚುರಂಜನ್, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ನಗರಸಭೆಯ ಅಧ್ಯಕ್ಷೆ ಹಾಗೂ ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪದಾಧಿಕಾರಿಗಳಾದ ಚುಮ್ಮಿದೇವಯ್ಯ, ಸಂಗೀತಾ ಪ್ರಸನ್ನ, ಕೆ.ಯು. ಅಬ್ದುಲ್ ರಜಾಕ್ ಹಾಜರಿದ್ದುದಾಗಿ ತಿಳಿಸಿದ್ದಾರೆ.