ಮಡಿಕೇರಿ, ಸೆ. 21: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನ ಪ್ರಯುಕ್ತ ಗ್ರೀನ್ ಸಿಟಿ ಫೋರಂ ಮುಂದಾಳತ್ವದಲ್ಲಿ ಪಾರಂಪರಿಕ ಕಟ್ಟಡ, ಮಡಿಕೇರಿ ಕೋಟೆ ಆವರಣ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಯಿತು. ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ನೇತೃತ್ವದಲ್ಲಿ ಫೋರಂ ಸದಸ್ಯರು ಶ್ರಮದಾನದ ಮೂಲಕ ಕೋಟೆ ಆವರಣ ಸ್ವಚ್ಛಗೊಳಿಸುವ ಕೆಲಸ ಮಡಿಕೇರಿ, ಸೆ. 21: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನ ಪ್ರಯುಕ್ತ ಗ್ರೀನ್ ಸಿಟಿ ಫೋರಂ ಮುಂದಾಳತ್ವದಲ್ಲಿ ಪಾರಂಪರಿಕ ಕಟ್ಟಡ, ಮಡಿಕೇರಿ ಕೋಟೆ ಆವರಣ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಯಿತು. ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ನೇತೃತ್ವದಲ್ಲಿ ಫೋರಂ ಸದಸ್ಯರು ಶ್ರಮದಾನದ ಮೂಲಕ ಕೋಟೆ ಆವರಣ ಸ್ವಚ್ಛಗೊಳಿಸುವ ಕೆಲಸ ಮಡಿಕೇರಿ, ಸೆ. 21: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನ ಪ್ರಯುಕ್ತ ಗ್ರೀನ್ ಸಿಟಿ ಫೋರಂ ಮುಂದಾಳತ್ವದಲ್ಲಿ ಪಾರಂಪರಿಕ ಕಟ್ಟಡ, ಮಡಿಕೇರಿ ಕೋಟೆ ಆವರಣ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಇಂದು ಮುಂಜಾನೆ ಚಾಲನೆ ನೀಡಲಾಯಿತು.

ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ನೇತೃತ್ವದಲ್ಲಿ ಫೋರಂ ಸದಸ್ಯರು ಶ್ರಮದಾನದ ಮೂಲಕ ಕೋಟೆ ಆವರಣ ಸ್ವಚ್ಛಗೊಳಿಸುವ ಕೆಲಸ ನೀಡಿದರು.

ಮಡಿಕೇರಿ ಕೋಟೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಗಿಡಗಂಟಿ ಕಡಿಯುವದರ ಮೂಲಕ ಕೋಟೆ ಆವರಣ ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿದೆ. ಈ ಕೆಲಸಕ್ಕೆ ಗ್ರೀನ್ ಸಿಟಿ ಫೋರಂ ಮುಂದಾಗಿರುವದು ಸ್ವಾಗತಾರ್ಹ. ಪ್ರವಾಸೋದ್ಯಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವ ದೆಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್ ಹೇಳಿದರು.

ತಾ.23ರಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನೇತೃತ್ವದಲ್ಲಿ ಅಧಿಕಾರಿಗಳು, ಸರ್ಕಾರಿ ನೌಕರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿವಿಧ ವಲಯದವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗುವದು. ಸಾರ್ವಜನಿಕ ಸ್ಥಳಗಳು

(ಮೊದಲ ಪುಟದಿಂದ) ಸ್ವಚ್ಛವಾಗಿರುವದರಿಂದ ಪ್ರವಾಸಿಗರಿಗೆ ಕೊಡಗಿನ ಬಗ್ಗೆ ಸದಾಭಿಪ್ರಾಯ ಮೂಡಲಿದೆ ಎಂದಿದ್ದಾರೆ.

ಕೋಟೆ ಆವರಣದಲ್ಲಿ ನಡೆಯುವ ಸ್ವಚ್ಛತಾ ಅಭಿಯಾನದಲ್ಲಿ ತಾ.22ರಂದು (ಇಂದು) ಮೈಸೂರು, ಬೆಂಗಳೂರಿನಿಂದ ಕೊಡಗು ಮೂಲದ ಉತ್ಸಾಹಿ ತರುಣರು ಪಾಲ್ಗೊಳ್ಳಲಿದ್ದಾರೆಂದು ಫೋರಂ ನಿರ್ದೇಶಕಿ ಕನ್ನಂಡ ಕವಿತಾ ಬೊಳ್ಳಪ್ಪ ಹೇಳಿದ್ದಾರೆ.

ಇಂದು ಪ್ರಾರಂಭವಾದ ಸ್ವಚ್ವತಾ ಕಾರ್ಯಕ್ರಮದಲ್ಲಿ ಗ್ರೀನ್ ಸಿಟಿ ಫೋರಂ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಸವಿತಾ ಭಟ್, ನಿರ್ದೇಶಕರಾದ ಕುಕ್ಕೇರ ಜಯ ಚಿಣ್ಣಪ್ಪ, ಮೋಂತಿ ಗಣೇಶ್, ಕಿರಿಯಮಾಡ ರತನ್ ತಮ್ಮಯ್ಯ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಟ್ಟನ ರಾಜೇಶ್, ಮಾದೇಟಿರ ತಿಮ್ಮಯ್ಯ, ಪ್ರವಾಸೋದ್ಯಮ ಅಧಿಕಾರಿ ರಾಘವೇಂದ್ರ ಪಾಲ್ಗೊಂಡಿದ್ದರು.