ಗೋಣಿಕೊಪ್ಪಲು, ಸೆ. 21: ಬ್ಯಾಂಕಿನಲ್ಲಿ 29 ಪಿಗ್ಮಿ ಸಂಗ್ರಹಕರು ದುಡಿಯುತ್ತಿದ್ದು ಇವರ ಪರಿಶ್ರಮದಿಂದ ಬ್ಯಾಂಕ್ ಲಾಭದತ್ತ ಮುನ್ನಡೆಯುತ್ತಿದೆ ಎಂದು ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಅರುಣ್ ಪೂಣಚ್ಚ ತಿಳಿಸಿದರು. ಗೋಣಿಕೊಪ್ಪಲಿನ ಕೋ ಆಪರೇಟಿವ್ ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ಗೋಣಿಕೊಪ್ಪ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಬ್ಯಾಂಕ್ ಲಾಭಾಂಶ ಗಳಿಸುತ್ತಿದೆ.

ಈ ಬಾರಿ ಸದಸ್ಯರಿಗೆ ಶೇ. 20 ಡಿವಿಡೆಂಡ್ ನೀಡಲಾಗುತ್ತಿದೆ. ಇದರಲ್ಲಿ ಶೇ. 5ರ ಹಣವನ್ನು ಒಟ್ಟು ಗೂಡಿಸಿ ಇತ್ತೀಚೆಗೆ ಮಳೆಯಿಂದ ತೊಂದರೆಗೀಡಾದ ಸಂತ್ರಸ್ತರನ್ನು ಗುರುತಿಸಿ ಹಣವನ್ನು ವೈಯುಕ್ತಿಕವಾಗಿ ಖುದ್ದು ವಿತರಿಸಲಾಗುವದು. ಒಟ್ಟು ಅಂದಾಜು 2 ಲಕ್ಷ ಸಹಾಯ ನೀಡುವ ಅಂದಾಜು ಮಾಡಲಾಗಿದೆ ಎಂದು ಸಭೆಗೆ ಅರುಣ್ ಪೂಣಚ್ಚ ತಿಳಿಸಿದರು.

ಸದಸ್ಯ ಕೃಷ್ಣಕುಮಾರ್, ಮಹಾಸಭೆಯ ಪುಸ್ತಕದಲ್ಲಿ ಹಲವು ತಪ್ಪುಗಳಿದ್ದು ಈ ಬಗ್ಗೆ ಕೂಲಂಕುಶÀವಾಗಿ ಪರಿಶೀಲಿಸಿದ ಬಗ್ಗೆ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಎ.ಎಂ. ಶಿಲ್ಪ, ಮುದ್ರಣ ಲೋಪದಿಂದ ಸಣ್ಣಪುಟ್ಟ ತಪ್ಪುಗಳು ಆಗಿವೆ. ಮುಂದಿನ ಸಾಲಿನಿಂದ ಈ ರೀತಿಯ ತಪ್ಪುಗಳು ಆಗದಂತೆ ಎಚ್ಚರ ವಹಿಸುತ್ತೇವೆ ಎಂದರು.

ಸದಸ್ಯರಾದ ನಾರಾಯಣಸ್ವಾಮಿ ನಾಯ್ಡು, ಪ್ರವೀಣ್ ಪೂಜಾರಿ, ಗಣೇಶ್ ರೈ ಡಾ. ಶಿವಪ್ಪ, ಬ್ಯಾಂಕ್ ಅಭಿವೃದ್ಧಿಯತ್ತ ಸಾಗುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಬ್ಯಾಂಕಿನ ಆಡಳಿತ ಮಂಡಳಿ, ಸಿಬ್ಬಂದಿಗಳ ಶ್ರಮ ಕಾರಣ ಎಂದರು.

ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ತೇರ್ಗಡೆಯಾದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು. ಸದಸ್ಯರಿಗೆ ಯಾವದೇ ತೊಂದರೆ ಕಂಡು ಬಂದಲ್ಲಿ ಬ್ಯಾಂಕಿನ ಸಿಇಒ ಹಾಗೂ ಅಧ್ಯಕ್ಷರನ್ನು ನೇರವಾಗಿ ಭೇಟಿ ಆಗುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳ ಬೇಕೆಂದು ಅರುಣ್ ತಿಳಿಸಿದರು. ಅಲ್ಲದೆ ಬ್ಯಾಂಕಿನಲ್ಲಿ ಹೆಚ್ಚಿನ ಪಿಗ್ಮಿ ಸಂಗ್ರಹಣೆ ಮಾಡಿದ ಗೋಣಿಕೊಪ್ಪಲಿನ ಪಿಗ್ಮಿದಾರರಾದ ಅಜೇಯ್ ಕುಮಾರ್, ಜಯಶ್ರೀ ಕೃಷ್ಣ, ಶೋಭ ಶಂಕರ್, ವೀರಾಜಪೇಟೆಯ ರಂಜನ್, ಲವ, ಪೆಮ್ಮಯ್ಯ, ಶ್ರೀಮಂಗಲದ ತುಳಸಿ ಅವರಿಗೆ ಬಹುಮಾನ ನೀಡಲಾಯಿತು.

ನಿರ್ದೇಶಕ ಚೇದಂಡ ಸುಮಿಸುಬ್ಬಯ್ಯ ಪ್ರಾರ್ಥಿಸಿದರು. ಮೃತಪಟ್ಟ ಸದಸ್ಯರಿಗೆ ಮೌನ ಆಚರಿಸಲಾಯಿತು. ಸ್ವಾಗತವನ್ನು ಕಾರ್ಯನಿರ್ವಾಹಣಾಧಿಕಾರಿ ಎ.ಎಂ. ಶಿಲ್ಪ ನಿರ್ವಹಿಸಿದರು. ಉಪಾಧ್ಯಕ್ಷ ಸುನಿಲ್ ಮಾದಪದ್ಪ ವಂದಿಸಿದರು.

ವೇದಿಕೆಯಲ್ಲಿ ನಿದೆರ್Éೀಶಕರಾದ ಕೆ.ಆರ್. ಬಾಲಕೃಷ್ಣ ರೈ, ಎನ್.ಕೆ. ದೇವಯ್ಯ, ಸಿ.ಡಿ. ಸುಬ್ಬಯ್ಯ, ದ್ಯಾನ್ ಸುಬ್ಬಯ್ಯ, ಪಿ.ಎಸ್. ಸುರೇಶ್, ಎ.ಜೆ. ಬಾಬು, ಎ.ಕೆ. ಉಮ್ಮರ್ ಹೆಚ್.ಎನ್. ಮುರುಗನ್, ಕೆ.ಕೆ. ರೀನಾ ರಾಜೀವ್ ಸೇರಿದಂತೆ ಪ್ರಮುಖರು ಹಾಜರಿದ್ದರು.