ಶನಿವಾರಸಂತೆ: ಶನಿವಾರಸಂತೆ ಸಮೀಪದ ಚಿಕ್ಕಕೊಳತ್ತೂರು ಬಸವೇಶ್ವರ ನಗರದಲ್ಲಿ ಮಕ್ಕಳು ಹಾಗೂ ಸಾರ್ವಜನಿಕರು ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಚಿಕ್ಕಕೊಳತ್ತೂರು ಕೆರೆಯಲ್ಲಿ ವಿಸರ್ಜಿಸಲಾಯಿತು.

ಉತ್ಸವ ಮೂರ್ತಿಗಳನ್ನು ಪೂಜಾ ಕಾರ್ಯಕ್ರಮಗಳು ಮುಗಿದ ನಂತರ ವಾಹನದಲ್ಲಿ ಕುಳ್ಳಿರಿಸಿ ಬಸವೇಶ್ವರ ನಗರದಲ್ಲಿ ಮೆರವಣಿಗೆ ಮೂಲಕ ಸಾಗುವಾಗ ಭಕ್ತಾದಿಗಳು ಹಣ್ಣುಕಾಯಿ ನೀಡಿ ಪೂಜಿಸಿ ಚಿಕ್ಕಕೊಳತ್ತೂರು ಕೆರೆಯಲ್ಲಿ ವಿಸರ್ಜಿಸಲಾಯಿತು.

ವಿಸರ್ಜನಾ ಸಂದರ್ಭ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್, ಸಿ.ಪಿ. ಚಂದ್ರಪ್ಪ, ದಿನೇಶ್, ಚಿನ್ನು, ಮಂಜು, ದೇವಪ್ಪ, ಸತೀಶ್, ಚೈತ್ರ, ನೇತ್ರ, ರಾಣಿ, ಕವಿತ, ಸುನಂದ, ಗಿರಿಜ, ಸಾರ್ವಜನಿಕರು ಪಾಲ್ಗೊಂಡಿದ್ದರು.ಗುಡ್ಡೆಹೊಸೂರು: ಇಲ್ಲಿನ ಸಮುದಾಯಭವನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಮೆರವಣಿಗೆಯಲ್ಲಿ ಗ್ರಾಮಸ್ಥರು ಸೇರಿ ಭಕ್ತಿಭಾವದೊಂದಿಗೆ ಪೂಜೆ ನೆರವೇರಿಸಿ, 3 ಗ್ರಾಮಗಳಿಗೆ ಮೆರವಣಿಗೆ ಸಾಗಿ ವಿಸರ್ಜಿಸಿದರು.

ಈ ಸಂದರ್ಭ ಅಲ್ಲಿನ ಗ್ರಾಮಸ್ಥರು ಮನೆಗಳ ಮುಂದೆ ಪೂಜೆ ನೆರವೇರಿಸುತ್ತಿದ್ದ ದೃಶ್ಯ ಕಂಡುಬಂತು. ನಂತರ ಸ್ಥಳೀಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ಸಮಿತಿಯ ಸದಸ್ಯರು ಹಾಜರಿದ್ದರು.