ವೀರಾಜಪೇಟೆ, ಸೆ. 21: ವೀರಾಜಪೇಟೆಯ ಶ್ರೀ ಬಸವೇಶ್ವರ ದೇವಾಲಯದಲ್ಲಿ ವೀರಾಜಪೇಟೆಯ ಸ್ವರಾಣವ ಸಂಗೀತ ಶಾಲೆಯ ಮುಖ್ಯಸ್ಥರಾದ ವಿದ್ವಾನ್ ಬಿ.ಎಸ್. ದಿಲಿಕುಮಾರ್ ಹಾಗೂ ಅಪೂರ್ವ ಹಾಗೂ ಶಿಷ್ಯೆ ವೃಂದದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮೂಡಿ ಬಂದಿತು.
ಗೌರಿ ಗಣೇಶ ಉತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಡಿಕೇರಿ ಇವರ ಪ್ರಾಯೋಜಕತ್ವದಲ್ಲಿ ನಡೆದ ಸಂಗೀತ ಕಾರ್ಯಕ್ರಮ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಪುಟ್ಟ ಮಕ್ಕಳಿಂದ ಲಂಬೋದರ ಲಕುಮಿಕರ, ವಿನಾಯಕ ಕೃತಿಗಳಿಂದ ಪ್ರಾರಂಭವಾಗಿ ವಿವಿಧ ದೇವರುಗಳ ನಾಮಗಳು ಶುಶ್ರಾವ್ಯವಾಗಿ ಮೂಡಿ ಬಂದಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲ ಎಂ.ಕೆ. ಪೂವಯ್ಯ ವಹಿಸಿದ್ದರು.
ಡಾ. ನರಸಿಂಹ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ದೇವಾಲಯದ ಮುಖ್ಯಸ್ಥ ಎನ್.ಜಿ. ಕಾಮತ್ ಮಾತನಾಡಿ, ಕರ್ನಾಟಕ ಶಾಸ್ರ್ತೀಯ ಸಂಗೀತವನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ನಂತರ ಕಾರ್ಯಕ್ರಮವನ್ನು ನಿರೂಪಿಸಿ, ವೀರೇಂದ್ರ ಕಾಮತ್ ವಂದಿಸಿದರು.