ಶನಿವಾರಸಂತೆ, ಸೆ. 21: ಭಾರತ ಕಾಫಿ ಮಂಡಳಿ, ಶನಿವಾರಸಂತೆ ಕಿರಿಯ ಕಾಫಿ ಮಂಡಳಿ ವತಿಯಿಂದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಕಾಫಿ ತೋಟದಲ್ಲಿ ಕಳೆದ 3 ವರ್ಷಗಳಿಂದಲೂ ಶಂಕುಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನೆಲೆ ಬೆಳ್ಳಾರಳ್ಳಿ, ಹಂಡ್ಲಿ ಮುಂತಾದ ಗ್ರಾಮಗಳ ಫಲಾನುಭವಿಗಳಿಗೆ ಭಾರತ ಕಾಫಿ ಮಂಡಳಿ ಮತ್ತು ಶನಿವಾರಸಂತೆ ಕಿರಿಯ ಕಾಫಿ ಮಂಡಳಿ ವತಿಯಿಂದ ಬೆಳ್ಳಾರಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಆಫ್ರಿಕನ್ ದೈತ್ಯ ಶಂಕು ಹುಳುವಿನ ನಿವಾರಣೆಗೊಳಿಸುವ ಉದ್ದೇಶದಿಂದ 1 ಎಕರೆಗೆ ಬೇಕಾಗುವಷ್ಟು 23 ಕೆ.ಜಿ. ಆಕ್ಕಿಶೌಡು, 100 ಗ್ರಾಂ. ಲಾರ್ವಿನ್ ಅನಿಲ, 100 ಗ್ರಾಂ ಹರಳೆಣ್ಣೆ, 3 ಕೆ.ಜಿ. ಬೆಲ್ಲ ಮತ್ತು ಕೈಚೀಲಗಳನ್ನು ಒಳಗೊಂಡಿರುವ ಕಿಟ್‍ಗಳನ್ನು ವಿತರಿಸಲಾಯಿತು.

ಸಾಂಕೇತಿಕವಾಗಿ ಕಿಟ್‍ಗಳನ್ನು ವಿತರಣೆ ಮಾಡಿದ ಕಾಫಿ ಮಂಡಳಿ ಸದಸ್ಯ ಎಂ.ಬಿ. ಅಭಿಮನ್ಯುಕುಮಾರ್, ಹಂಡ್ಲಿ ಮತ್ತು ಬೆಳ್ಳಾರಳ್ಳಿ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳಿಂದ ಆಫ್ರಿಕನ್ ದೈತ್ಯ ಶಂಕು ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತಿದೆ. ಕಳೆದ 1 ವರ್ಷಗಳಲ್ಲಿ ಶಂಕು ಹುಳು ನಿವಾರಣೆಗಾಗಿ ಕಾಫಿ ಮಂಡಳಿ, ಬೆಳೆಗಾರರ ಸಂಘ, ಹೋರಾಟಗಾರರ ಸಂಘ ಇತರ ಸಂಘ-ಸಂಸ್ಥೆಗಳು ಒಗ್ಗೂಡಿ ಶಂಕು ಹುಳುವನ್ನು ಹಿಡಿದು ಕೊಲ್ಲುವ ಕಾರ್ಯಾಚರಣೆಯನ್ನು ತೆಗೆದುಕೊಂಡಿತ್ತು. ಅದರಂತೆ ರೈತರು ಶಂಕು ಹುಳುವನ್ನು ಹಿಡಿದು ಕೊಲ್ಲುವ ಮೂಲಕ ಶೇ. 80 ರಷ್ಟು ಶಂಕು ಹುಳು ಬಾಧೆ ನಿಯಂತ್ರಣಗೊಂಡಿದೆ ಎಂದರು. ಕಳೆದ ಸಾಲಿನಲ್ಲಿ ಬೆಳ್ಳಾರಳ್ಳಿ ಮತ್ತು ಹಂಡ್ಲಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸುಮಾರು 25 ಟನ್ ಕಳೆದ 3 ವರ್ಷಗಳಿಂದ ಆಫ್ರಿಕನ್ ದೈತ್ಯ ಶಂಕು ಹುಳುವಿನ ಬಾಧೆ ಕಾಣಿಸಿಕೊಳ್ಳುತ್ತಿದೆ. ಕಳೆದ 1 ವರ್ಷಗಳಲ್ಲಿ ಶಂಕು ಹುಳು ನಿವಾರಣೆಗಾಗಿ ಕಾಫಿ ಮಂಡಳಿ, ಬೆಳೆಗಾರರ ಸಂಘ, ಹೋರಾಟಗಾರರ ಸಂಘ ಇತರ ಸಂಘ-ಸಂಸ್ಥೆಗಳು ಒಗ್ಗೂಡಿ ಶಂಕು ಹುಳುವನ್ನು ಹಿಡಿದು ಕೊಲ್ಲುವ ಕಾರ್ಯಾಚರಣೆಯನ್ನು ತೆಗೆದುಕೊಂಡಿತ್ತು. ಅದರಂತೆ ರೈತರು ಶಂಕು ಹುಳುವನ್ನು ಹಿಡಿದು ಕೊಲ್ಲುವ ಮೂಲಕ ಶೇ. 80 ರಷ್ಟು ಶಂಕು ಹುಳು ಬಾಧೆ ನಿಯಂತ್ರಣಗೊಂಡಿದೆ ಎಂದರು. ಕಳೆದ ಸಾಲಿನಲ್ಲಿ ಬೆಳ್ಳಾರಳ್ಳಿ ಮತ್ತು ಹಂಡ್ಲಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಸುಮಾರು 25 ಟನ್ ಮುರುಳೀಧರ್ ಮಾತನಾಡಿ, ಕಾಫಿ ಮಂಡಳಿಯಿಂದ ಶಂಕು ಹುಳುವಿನ ಸಮಸ್ಯೆಯನ್ನು ನಿವಾರಣೆ ಮಾಡುವಂತೆ ಸಲಹೆ ನೀಡಿದರು.

ಸೋಮವಾರಪೇಟೆ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಮುರಳೀಧರ್ ಮಾತನಾಡಿ, ಕಾಫಿ ಮಂಡಳಿಯಿಂದ ಶಂಕು ಹುಳು ನಿವಾರಣೆಗಾಗಿ ವಿತರಿಸಿದ ಕಿಟ್‍ನಲ್ಲಿರುವ ಸಾಮಗ್ರಿಗಳನ್ನು ಕಾಫಿ ಮಂಡಳಿ ಅಧಿಕಾರಿಗಳು ನೀಡುವ ಮಾಹಿತಿಯಂತೆ ಅನುಸರಿಸಬೇಕು. ಈ ಮೂಲಕ ಶಂಕು ಹುಳುವನ್ನು ಹಿಡಿದು ಕೊಲ್ಲುವಂತೆ ಸಲಹೆ ನೀಡಿದರು. ನಂತರ ಅವರು ರೈತರಿಗೆ ಶಂಕು ಹುಳುವನ್ನು ಹಿಡಿದು ಕೊಲ್ಲುವ ಮೊದಲು ಅನುಸರಿಸಬೇಕಾದ ಮಾರ್ಗದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಶನಿವಾರಸಂತೆ ಕಾಫಿ ಮಂಡಳಿ ಕಿರಿಯ ಸಂಪರ್ಕಾಧಿಕಾರಿ ಹೆಚ್. ವಿಶ್ವನಾಥ್, ಕಾಫಿ ಮಂಡಳಿ ಸಿಬ್ಬಂದಿ ಆಮಿ ವರ್ಗಿಸ್ ಮುಂತಾದವರಿದ್ದರು.