ನಾಪೆÇೀಕ್ಲು, ಸೆ. 21: ಸರ್ವರ ಸಹಕಾರದಿಂದ ಸಂಘವು ಅಭಿವೃದ್ಧಿಯ ಪಥದತ್ತ ಸಾಗಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 11.44 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಕಾರುಗುಂದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಹೇಳಿದರು.

ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ 1713 ಜನ ಸದಸ್ಯರಿದ್ದಾರೆ. ಪಸಕ್ತ ಸಂಘವು ಸುಮಾರು ರೂ. 2.18 ಕೋಟಿ ಠೇವಣಿಯನ್ನು ಹೊಂದಿದ್ದು, ಸಂಘದ ಸದಸ್ಯರಿಗೆ ರೂ. 7 ಕೋಟಿಗಳನ್ನು ಸಾಲವಾಗಿ ನೀಡಿದೆ ಎಂದರು. ಶೇ. 100 ಸಾಲ ವಸೂಲಿ ಮಾಡಿ ಸಂಘವು ‘ಬಿ’ ಶ್ರೇಣಿಯನ್ನು ಹೊಂದಿದೆ ಎಂದು ತಿಳಿಸಿದರು. ಸರಕಾರದ ಸಾಲ ಮನ್ನಾ ಯೋಜನೆಯಲ್ಲಿ ಈ ಸಂಘದ 322 ಮಂದಿಗೆ ಇದರ ಪ್ರಯೋಜನವಾಗಿದೆ ಎಂದರು. ಈ ಸಂದರ್ಭ ಸಭೆಯಲ್ಲಿ ಉಪಸ್ಥಿತರಿದ್ದ ಸಂಘದ ಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರಿಸಿ ಸಂದೇಹಗಳನ್ನು ಪರಿಹರಿಸಿದರು.

ಸಂಘದ ಸದಸ್ಯರ ಮಕ್ಕಳು ವಿದ್ಯಾಭ್ಯಾಸದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು.

ವೇದಿಕೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯು. ಕಾವೇರಮ್ಮ, ಐಸಿಐಸಿಐ ಬ್ಯಾಂಕಿನ ಮೇಲ್ವಿಚಾರಕ ಹರೀಶ್ ಹಾಗೂ ಸಂಘದ ನಿರ್ದೇಶಕ ರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ರ್ಯಾಲಿ ಮಾದಯ್ಯ ಸ್ವಾಗತಿಸಿದರೆ, ಸಂಘದ ನಿರ್ದೇಶಕ ಕೊಡಪಾಲು ಗಪ್ಪು ಗಣಪತಿ ಪ್ರಾರ್ಥಿ ಸಿ, ಟಿ.ಯು. ಕಾವೇರಮ್ಮ ನಿರೂಪಿಸಿದರೆ ಸಂಘದ ಉಪಾಧ್ಯಕ್ಷ ಕೊಪ್ಪಡ ತಿಮ್ಮಯ್ಯ ವಂದಿಸಿದರು.