ಗೋಣಿಕೊಪ್ಪ ವರದಿ, ಸೆ. 21: ಪಾಲಿಬೆಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅರುವತೋಕ್ಲು ಸರ್ವದೈವತಾ ಪದವಿ ಪೂರ್ವ ಕಾಲೇಜು ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ.
ಚೆಸ್ ಪಂದ್ಯಾಟದಲ್ಲಿ ಟಿ.ಜಿ. ಐಶ್ವರ್ಯ ಪ್ರಥಮ ಸ್ಥಾನಗಳಿಸುವದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ. ಬಾಲಕರ ಥ್ರೋಬಾಲ್ ಪಂದ್ಯಾಟದಲ್ಲಿ ಎನ್.ಆರ್. ರಾಹುಲ್, ವಿ.ಸಿ. ಸುಹರ್ಶನ್, ಪ್ರತೀಕ್, ಎ.ಎ. ಶಾಮಿದ್, ಮಿಲ್ಟ್ನ್, ನವೀನ್, ಅಜಯ್ ಕುಮಾರ್, ಸುಮಂತ್, ಜೀತಿನ್ ಸುಜೀತ್ ಅವರುಗಳು ಪ್ರಥಮ ಸ್ಥಾನದೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಕ ಪ್ರಮೋದ್ ವಿ.ಎನ್. ತರಬೇತಿ ನೀಡಿದ್ದಾರೆ.