ಗೋಣಿಕೊಪ್ಪಲು, ಸೆ. 21: ಕೊಡಗಿನಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಠಿ ಹಾಗೂ ಜಲಪ್ರಳಯದ ಹಿನ್ನೆಲೆ ಕೊಡಗು ಬಲಿಜ ಸಮಾಜದ ವತಿಯಿಂದ ತರಿಕೆರೆ, ಶಿರಾ ಸ್ನೇಹಿತರ ಸಂಯುಕ್ತ ಆಶ್ರಯದಲ್ಲಿ ಜಾತ್ಯತೀತವಾಗಿ ಜಿಲ್ಲೆಯ ವಿವಿಧ ಭಾಗದಲ್ಲಿನ ಸಂತ್ರಸ್ತರನ್ನು ಗುರುತಿಸಿ ಆಹಾರ ಸಾಮಗ್ರಿಗಳು ಹಾಗೂ ಔಷಧಿಯನ್ನು ವಿತರಿಸಲಾಗಿದ್ದು, ಇದೀಗ ಕರ್ನಾಟಕ ರಾಜ್ಯ ಬಲಿಜ ಸಂಘದ ಪ್ರಾಯೋಜನೆಯಲ್ಲಿ ಜಿಲ್ಲೆಯ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಲಿಜ ಸಮುದಾಯವನ್ನು ಗುರುತಿಸಿ ಸಣ್ಣ ಪ್ರಮಾಣದ ನೆರವು ಹಾಗೂ ಪ್ರತಿಭಾನ್ವಿತ ಬಲಿಜ ಸಮುದಾಯದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಉಚಿತ ಊಟ ವಸತಿ ಹಾಗೂ ಉನ್ನತ ಶಿಕ್ಷಣ ವ್ಯಾಸಂಗ ಕೊಡಿಸುವ ನಿಟ್ಟಿನಲ್ಲಿ ಕೊಡಗು ಬಲಿಜ ಸಮಾಜ ಸಂಯುಕ್ತಾಶ್ರಯದಲ್ಲಿ ತಾ. 22 ರಂದು ಗೋಣಿಕೊಪ್ಪಲು ಎಪಿಎಂಸಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅನಾರೋಗ್ಯ ಪೀಡಿತ ಬಲಿಜ ಬಂಧುವೊಬ್ಬರಿಗೆ ಆರ್ಥಿಕ ನೆರವು, ಪಿಯುಸಿ ನಂತರದ ಪದವಿ ಹಾಗೂ ಸ್ನಾತಕೋತ್ತರ ಪದವಿವರೆಗೆ ಉಚಿತ ವಿದ್ಯಾಭ್ಯಾಸ, ಜಿಲ್ಲೆಯ ಬಲಿಜ ಬಂಧುಗಳ ಪರಿಚಯ ಕಾರ್ಯ ಕ್ರಮವನ್ನು ಮೂರು ತಾಲೂಕುಗಳಲ್ಲಿಯೂ ಹಮ್ಮಿಕೊಳ್ಳಲಾಗುವದು ಎಂದು ಕೊಡಗು ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಬಲಿಜ ಸಂಘದ ಅಧ್ಯಕ್ಷ ಹಾಗೂ ಬೆಂಗಳೂರು ನ್ಯೂ ಬಾಲ್ಡ್‍ವಿನ್ ಶಾಲಾ ಸಂಸ್ಥಾಪಕ ಡಾ.ಟಿ. ವೇಣುಗೋಪಾಲ್ ಅವರು ಜಿಲ್ಲೆಯ ಸುಮಾರು 200 ಕುಟುಂಬಗಳಿಗೆ ನೆರವಿನ ಹಸ್ತ ನೀಡಲಿದ್ದು ಮೊದಲ ಹಂತವಾಗಿ ಗೋಣಿಕೊಪ್ಪಲಿನಲ್ಲಿ ವೀರಾಜಪೇಟೆ ತಾಲೂಕಿನ ಸುಮಾರು 75 ಮಂದಿ ಫಲಾನುಭವಿಗಳಿಗೆ ಆಹಾರ ಕಿಟ್ ಇತ್ಯಾದಿ ಸಾಮಗ್ರಿ ವಿತರಣೆ ಮಾಡಲಿದ್ದಾರೆ. ತಾ. 22 ರಂದು ಅಪರಾಹ್ನ 4 ಗಂಟೆಗೆ ಮೂರ್ನಾಡುವಿನಲ್ಲಿ ಮಡಿಕೇರಿ ತಾಲೂಕು ಬಲಿಜ ಸಮುದಾಯವನ್ನು ಭೇಟಿ ಮಾಡಿ ನೆರವು ನೀಡಲಿದ್ದಾರೆ.

ಸೋಮವಾರಪೇಟೆ ತಾಲೂಕು ಕಾರ್ಯಕ್ರಮವನ್ನು ತಾ. 28 ರ ನಂತರ ಶಿರಂಗಾಲದಲ್ಲಿ ಏರ್ಪಡಿಸಲಾಗುವದು. ಇತ್ತೀಚೆಗೆ ಹಾತೂರು ಶಾಲಾ ಮೈದಾನದಲ್ಲಿ ಜರುಗಿದ ಬಲಿಜ ಕ್ರೀಡೋತ್ಸವದ ಯಶಸ್ಸಿನಲ್ಲಿ ಭಾಗಿಯಾದ ಕೊಡಗು ಬಲಿಜ ಸಮಾಜ ನಿರ್ದೇಶಕರು ಹಾಗೂ ಹಿತೈಷಿಗಳ ಮೂಲಕ ಜಿಲ್ಲೆಯ 200 ಅರ್ಹ ಫಲಾನುಭವಿಗಳ ಕುಟುಂಬ ಆಯ್ಕೆ ಮಾಡಲಾಗಿದೆ. ಪ್ರತಿಭಾನ್ವಿತ ಬಡ ಕೂಲಿ ಕಾರ್ಮಿಕ ಬಲಿಜ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗವನ್ನು ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿಯೂ ಆಯ್ಕೆ ಪ್ರಕ್ರಿಯೆ ನಡೆದಿದೆ.

ಇತ್ತೀಚೆಗಿನ ಅತಿವೃಷ್ಟಿಯಲ್ಲಿ ಮನೆ ಕಳೆದುಕೊಂಡಿರುವ ನಾಪೆÇೀಕ್ಲುವಿನ ಬಲಿಜ ದಂಪತಿಗೆ ಮನೆ ಕಟ್ಟಿಕೊಡುವ ನಿಟ್ಟಿನಲ್ಲಿಯೂ ಪ್ರಯತ್ನ ಸಾಗಿದೆ ಎಂದು ತಿಳಿಸಿದ್ದಾರೆ. ಗೋಣಿಕೊಪ್ಪಲಿನಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್, ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಡಿ. ಸುವಿನ್ ಗಣಪತಿ, ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಕರ್ನಾಟಕ ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ಡಾ. ಬಿ.ಎಂ. ರವಿ ನಾಯ್ಡು, ಬೆಂಗಳೂರು ಉತ್ತುಂಗ ಸೌಹಾರ್ದ ಸಹಕಾರ ಸಂಘದ ಸಿಇಓ ರಾಜಶೇಖರ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.