ಮಡಿಕೇರಿ, ಸೆ. 21: ಭಾಗಮಂಡಲದ ಕೊಡಗು ಪ್ರಗತಿಪರ ಜೇನು ಕೃಷಿಕರ ಸಂಘದ ನೂತನ ಆಡಳಿತ ಮಂಡಳಿ ಮುಂದಿನ 5 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದೆ.
ಜಾತ್ಯತೀತ ಜನತಾ ದಳ ಬೆಂಬಲಿತ ಹೊಸೂರು ಸತೀಶ್ ಕುಮಾರ್ ನೇತೃತ್ವದಲ್ಲಿ 10 ಮಂದಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಾಮಾನ್ಯ ಕ್ಷೇತ್ರಕ್ಕೆ ಹೊಸೂರು ಸತೀಶ್ ಜೋಯಪ್ಪ, ಸಿರಕಜೆ ಪ್ರಸನ್ನ ಕುಮಾರ್, ಸೂರ್ತಲೆ ಜನಾರ್ಧನ, ಕೋಡಿ ಮೋಟಯ್ಯ, ಪಾಣತ್ತಲೆ ಲೋಕನಾಥ್, ಕೆದಂಬಾಡಿ ಮೋಹನ್, ಪೆÇಡನೊಳಂಡ ವಿಠಲ, ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಸಿರಕಜೆ ಕುಸುಮ, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಅಯ್ಯಣ್ಣಿರ ದಿನೇಶ್, ಪರಿಶಿಷ್ಟ ಪಂಗಡಕ್ಕೆ ಕೆ.ಟಿ.ಜೀವನ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ರಘು ಅವರು ಕಾರ್ಯನಿರ್ವಹಿಸಿದರು. ಸೋಮವಾರಪೇಟೆ ತಾಲೂಕಿನ 5 ನಿರ್ದೇಶಕರ ಸ್ಥಾನಗಳಿಗೆ 3 ಸ್ಥಾನಕ್ಕೆ ಮಾತ್ರ ನಾಮಪತ್ರ ಸಲ್ಲಿಕೆಯಾದ ಕಾರಣ ಮೂವರು ಅವಿರೋಧವಾಗಿ ಆಯ್ಕೆಯಾದರು.