ಮಡಿಕೇರಿ, ಸೆ. 21: ಕುಶಾಲನಗರದ ವಾಲ್ಮೀಕಿ ಭವನದಲ್ಲಿನ ಪರಿಹಾರ ಕೇಂದ್ರದಲ್ಲಿ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಮಹೇಶ್ ಅವರ ಮೇಲೆ ತಾ. 18ರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ವಾಲ್ಮೀಕಿ ಭವನದಲ್ಲಿ ಪ್ರಾಕೃತಿಕ ವಿಕೋಪದಿಂದ ನಿರಾಶ್ರಿತರಾದ ಸುಮಾರು 287 ಮಂದಿ ಆಶ್ರಯ ಪಡೆದಿದ್ದರು. ತಾ. 18ರಂದು ಸಂಜೆ ಹೊರಗಿನಿಂದ ಬಂದ ಪರಿಹಾರ ಸಾಮಗ್ರಿಗಳನ್ನು ಪರಿಹಾರ ಕೇಂದ್ರದಲ್ಲಿ ಹಂಚಲು ಬಿಡಲಿಲ್ಲ ಎಂದು ಕೇಂದ್ರದ ನೋಡಲ್ ಅಧಿಕಾರಿ ಹಾಗೂ ನಿರಾಶ್ರಿತ ಕೇಂದ್ರದಲ್ಲಿದ್ದ ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಇದಾದ ಬಳಿಕ ರಾತ್ರಿ ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಅನಧಿಕೃತ ನೆರೆ ಸಂತ್ರಸ್ತರು ಬಂದಿರುವದಾಗಿ ದೊರೆತ ಮಾಹಿತಿಯನ್ವಯ ತಹಶೀಲ್ದಾರ್ ಮಡಿಕೇರಿ, ಸೆ. 21: ಕುಶಾಲನಗರದ ವಾಲ್ಮೀಕಿ ಭವನದಲ್ಲಿನ ಪರಿಹಾರ ಕೇಂದ್ರದಲ್ಲಿ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಮಹೇಶ್ ಅವರ ಮೇಲೆ ತಾ. 18ರ ರಾತ್ರಿ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು. ವಾಲ್ಮೀಕಿ ಭವನದಲ್ಲಿ ಪ್ರಾಕೃತಿಕ ವಿಕೋಪದಿಂದ ನಿರಾಶ್ರಿತರಾದ ಸುಮಾರು 287 ಮಂದಿ ಆಶ್ರಯ ಪಡೆದಿದ್ದರು. ತಾ. 18ರಂದು ಸಂಜೆ ಹೊರಗಿನಿಂದ ಬಂದ ಪರಿಹಾರ ಸಾಮಗ್ರಿಗಳನ್ನು ಪರಿಹಾರ ಕೇಂದ್ರದಲ್ಲಿ ಹಂಚಲು ಬಿಡಲಿಲ್ಲ ಎಂದು ಕೇಂದ್ರದ ನೋಡಲ್ ಅಧಿಕಾರಿ ಹಾಗೂ ನಿರಾಶ್ರಿತ ಕೇಂದ್ರದಲ್ಲಿದ್ದ ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಇದಾದ ಬಳಿಕ ರಾತ್ರಿ ವಾಲ್ಮೀಕಿ ಭವನದ ಪರಿಹಾರ ಕೇಂದ್ರದಲ್ಲಿ ಅನಧಿಕೃತ ನೆರೆ ಸಂತ್ರಸ್ತರು ಬಂದಿರುವದಾಗಿ ದೊರೆತ ಮಾಹಿತಿಯನ್ವಯ ತಹಶೀಲ್ದಾರ್ ಬಂಧಿಸಲಾಗಿದೆ. ಮಕ್ಕಂದೂರು ರಾಟೆಮನೆ ಕಾಲೋನಿಯ ಸಂಜೀವ, ವಸಂತ್ ಕುಮಾರ್, ಟಿ.ಸಿ. ಸಿದ್ದು, ಆರ್. ಅಣ್ಣಪ್ಪ, ಪಿ.ಕೆ. ಸಂಜು, ಪಿ.ಕೆ. ತಿಮ್ಮಪ್ಪ, ಪಿ.ಕೆ. ಮಂಜುನಾಥ, ಪಿ.ಎಸ್. ಮಂಜುನಾಥ್, ಚಿತ್ರಾ, ನಿಷಾ, ಎಂ.ಎಂ. ಮೋಹನ್, ಆನಂದ, ಪಿ.ವಿ. ರೋಷನ್, ಕಡಗದಾಳುವಿನ ಸಿ.ಕೆ. ತೇಜ್ ಕುಮಾರ್, ಹಾಲೇರಿ ತಾತಿಬಾಣೆ ಪೈಸಾರಿಯ ಆದೀಶ್ ಕುಮಾರ್ ಇವರುಗಳನ್ನು ಬಂಧಿಸಲಾಗಿದೆ, ಚಿತ್ರಾ ಹಾಗೂ ನಿಶಾಳನ್ನು ತಹಶೀಲ್ದಾರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ಬಂಧಿಸಲಾಗಿದೆ. ಬಂಧಿತರಲ್ಲಿ ಪಿ.ಎಸ್. ಮಂಜುನಾಥ್ ವಿದ್ಯಾರ್ಥಿಯಾಗಿದ್ದು, ಉಳಿದವರೆಲ್ಲರೂ ಕೂಲಿ ಕಾರ್ಮಿಕರಾಗಿ ದ್ದಾರೆ. ಆರೋಪಿಗಳ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದ್ದು, ಇವರುಗಳು ನೈಜ ಸಂತ್ರಸ್ತರೆ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದರು.

(ಮೊದಲ ಪುಟದಿಂದ)

ಬಂಧಿತರ ಬಿಡುಗಡೆಗೆ ಆಗ್ರಹ

ಕುಶಾಲನಗರದ ವಾಲ್ಮೀಕಿ ಭವನದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆ ಬಂಧಿಸಲ್ಪಟ್ಟಿರುವವರನ್ನು ತಕ್ಷಣ ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳುವದಾಗಿ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ಮಂಜುನಾಥ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ಸಂದರ್ಭ ರೈತ ಸಂಘದ ಕಾರ್ಯದರ್ಶಿ ಕೆ.ಟಿ. ಆನಂದ, ಸದಸ್ಯರಾದ ದಿನೇಶ್, ಜಯಣ್ಣ ಉಪಸ್ಥಿತರಿದ್ದರು.