ವೀರಾಜಪೇಟೆ, ಸೆ. 21: ಇತ್ತೀಚೆಗೆ ಅಮ್ಮತ್ತಿಯಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೀರಾಜಪೇಟೆಯ ಕಾವೇರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಾಲಕರು ಥ್ರೋಬಾಲ್ ಹಾಗೂ ಖೋ-ಖೋ ಪಂದ್ಯಗಳಲ್ಲಿ ಪ್ರಥಮ ಸ್ಥಾನವನ್ನುಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಪೊನ್ನಂಪೇಟೆಯಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ನಲ್ಲಿ ಎರಡನೇ ಸ್ಥಾನವನ್ನು ಗಳಿಸಿರುತ್ತಾರೆ.
ಪ್ರಾಂಶುಪಾಲ ಪಿ.ಎನ್. ವಿನೋದ್, ಮುಖ್ಯ ಶಿಕ್ಷಕಿ ಜ್ಯೋತಿ ಬಿ.ಎಸ್. ಕ್ರೀಡಾ ಶಿಕ್ಷಕ ಮಿಥುನ್. ಕೆ.ಜಿ. ಹಾಗೂ ಸಹ ಶಿಕ್ಷಕಿ ಸುಲೋಚನ .ಪಿ.ಕೆ. ಹಾಜರಿದ್ದರು.