ಗೋಣಿಕೊಪ್ಪಲು, ಸೆ. 21: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ವಾರ್ಷಿಕ 134ಕೋಟಿ ವಹಿವಾಟು ನಡೆಸುವದರೊಂದಿಗೆ 45 ಲಕ್ಷ ಲಾಭÀದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಮೂಕೋಂಡ ವಿಜುಸುಬ್ರಮಣಿ ತಿಳಿಸಿದರು.

ಬ್ಯಾಂಕಿನ ಆಡಳಿತ ಮಂಡಳಿಯು ಪ್ರಸಕ್ತ ವಹಿವಾಟಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 1921ರಲ್ಲಿ ಪ್ರಾರಂಭಗೊಂಡ ಸಂಘವು ಕರ್ನಾಟಕದ ಸಹಕಾರ ಸಂಘಗಳಲ್ಲಿ ಪ್ರಥಮವಾಗಿ ಏಷಿಯನ್ ಪೇಯಿಂಟ್ ಅವರ ಬಣ್ಣ ಸಂಯೋಜನಾ ಘಟಕವನ್ನು ಆರಂಭಿಸಿದೆ. ಬ್ಯಾಂಕಿನಲ್ಲಿ ಸ್ಟ್ಯಾಂಪ್ ಪೇಪರ್, ಜೆರಾಕ್ಸ್ ಯಂತ್ರ ಅಳವಡಿಸಿದ್ದು, ಈ ಬಾರಿ ಬ್ಯಾಂಕ್‍ನ ಸದಸ್ಯರಿಗೆ ಹೆಚ್ಚಿನ ಲಾಭಾಂಶದ ಗೋಣಿಕೊಪ್ಪಲು, ಸೆ. 21: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘವು ವಾರ್ಷಿಕ 134ಕೋಟಿ ವಹಿವಾಟು ನಡೆಸುವದರೊಂದಿಗೆ 45 ಲಕ್ಷ ಲಾಭÀದಲ್ಲಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಮೂಕೋಂಡ ವಿಜುಸುಬ್ರಮಣಿ ತಿಳಿಸಿದರು.

ಬ್ಯಾಂಕಿನ ಆಡಳಿತ ಮಂಡಳಿಯು ಪ್ರಸಕ್ತ ವಹಿವಾಟಿನ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 1921ರಲ್ಲಿ ಪ್ರಾರಂಭಗೊಂಡ ಸಂಘವು ಕರ್ನಾಟಕದ ಸಹಕಾರ ಸಂಘಗಳಲ್ಲಿ ಪ್ರಥಮವಾಗಿ ಏಷಿಯನ್ ಪೇಯಿಂಟ್ ಅವರ ಬಣ್ಣ ಸಂಯೋಜನಾ ಘಟಕವನ್ನು ಆರಂಭಿಸಿದೆ. ಬ್ಯಾಂಕಿನಲ್ಲಿ ಸ್ಟ್ಯಾಂಪ್ ಪೇಪರ್, ಜೆರಾಕ್ಸ್ ಯಂತ್ರ ಅಳವಡಿಸಿದ್ದು, ಈ ಬಾರಿ ಬ್ಯಾಂಕ್‍ನ ಸದಸ್ಯರಿಗೆ ಹೆಚ್ಚಿನ ಲಾಭಾಂಶದ 624.30 ಲಕ್ಷ ಅಲ್ಪಾವಧಿ ಫಸಲು ಸಾಲ ಪಡೆದಿದ್ದು, ನಿಗದಿತ ಸಮಯದಲ್ಲಿ ಮರುಪಾವತಿ ಮಾಡಲಾಗಿದೆ ಎಂದ ವಿಜುಸುಬ್ರಮಣಿ ಸಂಘದ 328 ಸದಸ್ಯರಿಗೆ ಸಾಲ ಮನ್ನಾದ ಪ್ರಯೋಜನ ಲಭಿಸಿದೆ ಎಂದರು.

ಠೇವಣಿ ಸಂಗ್ರಹಣೆ, ಸಾಲ ವಿತರಣೆ ಮತ್ತು ವಸೂಲಾತಿ, ಮಾರಾಟ ಮುಂತಾದ ಆರ್ಥಿಕ ಚಟುವಟಿಕೆ ಕೈಗೊಂಡು ಸದಸ್ಯರ ಅಗತ್ಯತೆಗಳನ್ನು ಪೂರೈಸಿ ಅತಿ ಹೆಚ್ಚಿನ ಲಾಭದಲ್ಲಿ ಬ್ಯಾಂಕ್ ಮುನ್ನಡೆಯುತ್ತಿದೆ ಎಂದು ಮಾಹಿತಿ ಒದಗಿಸಿದರು.

ಈ ಸಂದರ್ಭ ಉಪಾಧ್ಯಕ್ಷ ಎಂ.ಎಂ. ಸದಾ ಅಪ್ಪಚ್ಚು, ನಿರ್ದೇಶಕರಾದ, ಕೆ.ಕೆ. ಸುಬ್ರಮಣಿ, ಎಂ.ಎಂ. ಕಾಳಪ್ಪ, ವಿ.ವಿ. ಡಾಲು, ಎ.ಎಸ್. ಶ್ಯಾಂ, ಕೆ.ಜಿ. ಧರ್ಮಜ, ಜೆ.ಕೆ. ಶುಭಾಷಿಣಿ, ಕೆ.ಜಿ. ಬೋಜಮ್ಮ, ಹೆಚ್.ಟಿ. ದಿನೇಶ್, ಮೇಲ್ವಿಚಾರಕ ಶಂಕರ್, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ. ಶಶಿಕಲಾ ಉಪಸ್ಥಿತರಿದ್ದರು.