ಪೊನ್ನಂಪೇಟೆ, ಸೆ. 21: ಕೊಡಗು ಜಿಲ್ಲೆಯ ಪ್ರತಿಷ್ಟಿತ ಕೊಡವ ಸಮಾಜಗಳಲ್ಲಿ ಒಂದಾದ ಪೊನ್ನಂಪೇಟೆ ಕೊಡವ ಸಮಾಜ ತನ್ನ 31ನೇ ವಾರ್ಷಿಕ ಮಹಾಸಭೆಯನ್ನು ತಾ. 23 ರಂದು ನಡೆಸಲಿದ್ದು ಮಹಾಸಭೆಯಲ್ಲಿ ಸದಸ್ಯರುಗಳ ಅನುಮತಿ ಪಡೆದು ದಾನಿಗಳ ಸಹಕಾರದಿಂದ ಚಿಕ್ಕಮುಂಡೂರು ಗ್ರಾಮದಲ್ಲಿರುವ ಕೊಡವ ಸಮಾಜದ ಆಸ್ತಿಯಲ್ಲಿ ನೂತನ ಕಲ್ಯಾಣ ಮಂಟಪವನ್ನು ಸ್ಥಾಪಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್ ಬೋಪಯ್ಯ ಮಾಹಿತಿ ನೀಡಿದ್ದಾರೆ.

1986 ನೇ ಇಸವಿಯಲ್ಲಿ ದಾನಿಗಳ ಸಹಕಾರದಿಂದ ಸ್ಥಾಪಿತವಾದ ಕೊಡವ ಸಮಾಜ ಇಂದು 3042 ಸದಸ್ಯರುಗಳನ್ನು ಹೊಂದಿದೆ. ಸದಸ್ಯರುಗಳ ಅನುಕೂಲಕ್ಕಾಗಿ ಮರಣ ನಿಧಿ ವಿದ್ಯಾಸಂಸ್ಥೆ ಸಾಂಸ್ಕøತಿಕ ಕೇಂದ್ರ ಬಾಕ್ಸಿಂಗ್ ಕ್ಲಬ್ ಸ್ಥಾಪಿಸಿದೆ.ಸಮಾಜದ ಅಂಗ ಸಂಸ್ಥೆಯಾದ ಅಪ್ಪಚ್ಚಕವಿ ವಿದ್ಯಾಲಯ 1994 ನೇ ಇಸವಿಯಲ್ಲಿ ಆರಂಭಗೊಂಡು 2017-18-ನೇ ಅವದಿಗೆ 293 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದಸ್ಯರುಗಳ ಅನುಕೂಲಕ್ಕೆ ಸ್ಥಾಪನೆಯಾದ ನ್ಯಾಯಪೀಠ ಹಲವು ಸಣ್ಣಪುಟ್ಟ ವ್ಯಾಜ್ಯಗಳನ್ನು ಅಲ್ಪ ಸಮಿತಿಯಲ್ಲಿ ತೀರ್ಮಾನಿಸುತ್ತಿದೆ. ಪ್ರಸ್ತುತ ಚಿರಿಯಪಂಡ ಉತ್ತಪ್ಪನವರು ಅಧ್ಯಕ್ಷರಾಗಿರುತ್ತಾರೆ. ಸ್ಫೋಡ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ನ ಅಧ್ಯಕ್ಷರಾಗಿ ಚೆಪ್ಪುಡೀರ ಪೊನ್ನಪ್ಪನವರು ಕಾರ್ಯ ನಿರ್ವಹಿಸುತ್ತಿದ್ದು, ಸ್ಫೋಟ್ರ್ಸ್ ಅಂಡ್ ರಿಕ್ರಿಯೇಷನ್ ಪ್ರಸ್ತುತ 300 ಸದಸ್ಯರುಗಳನ್ನು ಹೊಂದಿದೆ. ಕೊಡವ ಸಮಾಜದಲ್ಲಿ 2017 -18 ರ ಅವಧಿಯಲ್ಲಿ 80 ಮದುವೆಗೆ ಮತ್ತು ಇತರ ಕಾರ್ಯಗಳಿಗೆ ಬಾಡಿಗೆ ನೀಡಿದ್ದು ಕೊಡವ ಸಮಾಜವು ವಾರ್ಷಿಕ 4 ಕೋಟಿ 84 ಲಕ್ಷ ಒಟ್ಟು ವ್ಯವಹಾರ ನಡೆಸಿದೆ ಎಂದು ವಿವರಿಸಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಉಪಾಧ್ಯಕ್ಷ ಚೆಪ್ಪುಡೀರ ಪಿ. ಬೋಪಣ್ಣ, ಗೌರವ ಕಾರ್ಯದರ್ಶಿಯಾದ ಪೊನ್ನಿಮಾಡ ಎಸ್. ಸುರೇಶ್, ಜಂಟಿ ಕಾರ್ಯದರ್ಶಿಯಾದ ಅಪ್ಪಂಡೆರಂಡ ಆರ್. ಶಾರದ, ಖಜಾಂಚಿಯಾಗಿ ಮೂಕಳೇರ.ಪಿ.ಲಕ್ಷ್ಮಣ, ನಿರ್ದೇಶಕರುಗಳಾಗಿ ಮಲ್ಲಮಾಡ ಪ್ರಭು ಪೂಣಚ್ಚ, ಮೂಕಳಮಾಡ ಅರಸು ನಂಜಪ್ಪ, ಅಡಂಡ್ಡ ಸುನಿಲ್ ಸೋಮಯ್ಯ, ಚೆಪ್ಪುಡೀರ ರಾಕೀಶ್ ದೇವಯ್ಯ, ಮಂಡಚಂಡ.ಎ. ಚಿಟ್ಯಪ್ಪ (ದಿನೇಶ್), ಚೆಪ್ಪುಡೀರ ರೂಪ ಉತ್ತಪ್ಪ, ಚೊಟ್ಟಕಾಳಪಂಡ ಆಶಾ ಪ್ರಕಾಶ್, ಹಾಗೂ ಖಾಯಂ ಆಹ್ವಾನಿತ ನಿರ್ದೇಶಕರಾಗಿ ಚೆಪ್ಪಡೀರ ಪಿ. ಕಿಟ್ಟು ಅಯ್ಯಪ್ಪ ಉಪಸ್ಥಿತರಿದ್ದರು.