*ಗೋಣಿಕೊಪ್ಪಲು, ಸೆ. 21: ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ 32 ಲಕ್ಷದ 78 ಸಾವಿರದ 334 ರೂಪಾಯಿಗಳು ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಚಿಮ್ಮಣಮಾಡ ಎಸ್. ಕೃಷ್ಣ ಗಣಪತಿ ಮಾಹಿತಿ ನೀಡಿದ್ದಾರೆ.

ಬಾಳೆಲೆ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ 56ನೇ ವರ್ಷದ ವಾóರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ ಬ್ಯಾಂಕ್ ಲಾಭ ಗಳಿಸಿದ ಹಣದಲ್ಲಿ ಅಂದಾಜು 3 ಲಕ್ಷ ರೂಪಾಯಿಯನ್ನು ಪ್ರಕೃತಿ ವಿಕೋಪದಡಿ ನಲುಗಿದ ಜಿಲ್ಲೆಯ ನೆರೆ ಸಂತ್ರಸ್ತರಿಗೆ ನೀಡುವದಾಗಿ ತಿಳಿಸಿದರು.

ಬ್ಯಾಂಕಿನ ಸದಸ್ಯರಿಗೆ ಸರ್ಕಾರದ ಆದೇಶದಂತೆ 3 ಲಕ್ಷ ರೂಪಾಯಿಗಳ ವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲಾಗಿದೆ. ಕಾಫಿ ಮತ್ತು ಕಾಳುಮೆಣಸಿನ ಈಡಿನ ಸಾಲ ರೂಪದಲ್ಲಿ 198.84 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಸ್ವಸಾಯ ಗುಂಪುಗಳ ಸಾಲವಾಗಿ 4 ಲಕ್ಷ ವೇತನಾದಾರಿತ ಸಾಲವಾಗಿ 4.14 ಲಕ್ಷ ಹಾಗೂ ಇತರ ಸಾಲಗಳನ್ನು ನೀಡಲಾಗಿದೆ ಎಂದು ಹೇಳಿದರು. ಪ್ರಸ್ತುತ ಸಾಲಿನಲ್ಲಿ ಬ್ಯಾಂಕ್ ಮೂಲಕ 240 ಟನ್. ಗೊಬ್ಬರವನ್ನು ರೈತ ಸದಸ್ಯರಿಗೆ ವಿತರಿಸಲಾಗಿದೆ. ರಾಜ್ಯ ಮಾರಾಟ ಮಹಾ ಮಂಡಳಿಯಿಂದ ನೇರವಾಗಿ ಗೊಬ್ಬರ ಖರೀದಿಸಲಾಗಿದೆ ಎಂದು ಹೇಳಿದರು.

ಶೇ. 94.65 ರಷ್ಟು ಸಾಲ ವಸೂಲಿಯಾಗಿದೆ ಉಳಿದ ಸಾಲವನ್ನು ಇಲಾಖಾ ನಿಯಮದಂತೆ ಸಾಲಾ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದೆ ಅಲ್ಪಾವಧಿ ಕೃಷಿ ಸಾಲವನ್ನು ಹೊಂದಿರುವ ರೈತರ 50 ಸಾವಿರ ರೂಪಾಯಿವರೆಗಿನ ಸಾಲವನ್ನು ಸರ್ಕಾರದ ಆದೇಶದ ಅನ್ವಯ ಮನ್ನ ಮಾಡಲಾಗಿದೆ.

1845 ಸದಸ್ಯರುಗಳನ್ನು ಬ್ಯಾಂಕ್ ಹೊಂದಿದ್ದು ರೈತರ ಏಳಿಗೆಗಾಗಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದು ಅಭಿವೃದ್ದಿ ಯತ್ತ ಹೆಜ್ಜೆ ಹಾಕುತ್ತಿದೆ. ಹಿರಿಯ ಸದಸ್ಯರ ಮಾರ್ಗದರ್ಶನ ಚಿಂತನೆ ಗಳಿಂದ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು. ಸಭೆ ಪ್ರಾರಂಭದ ಮೊದಲು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಮಡಿದವರಿಗೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಸಂಘದ ಸದಸ್ಯರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.

ಸಭೆಯಲ್ಲಿ ಸಂಘದ ಉಪಾದ್ಯಕ್ಷ ಅಡ್ಡೇಂಗಡ ಆರ್. ಗೀತಾ, ನಿರ್ದೇಶಕರುಗಳಾದ ಕಾಂಡೇರಾ ಬಿ. ಮಾದಪ್ಪ, ಪಾರುವಂಗಡ. ಎನ್. ಕಾವೇರಪ್ಪ, ಕಾಡ್ಯಮಾಡ ಎಸ್. ಉತ್ತಪ್ಪ ಮಾಚಂಗಡ ಎ. ರೋಶÀನ್, ಮೇಚಂಡ ಪಿ. ಸೋಮಯ್ಯ, ಕಳ್ಳಿಚಂಡ ಬಿ. ಚಿತ್ರ, ಹೆಚ್.ಹೆಚ್. ಗಣೇಶ್, ಪಾರುವಂಗಡ ಎಂ. ಪೆಮ್ಮಯ್ಯ, ಆದೇಂಗಡ ಕೆ. ಚಂದ್ರಶೇಖರ್, ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ಎ.ಎ. ಯಶೋದ ಉಪಸ್ಥಿತರಿದ್ದರು.