ಕೂಡಿಗೆ, ಸೆ. 21: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಕೂಡಿಗೆ ಸರ್ಕಲ್‍ನ ಬಸ್ ತಂಗುದಾಣದ ಆವರಣದಲ್ಲಿ ಮಾದಕ ದ್ರವ್ಯ ಬಳಕೆ ವಿರೋಧಿ ದಿನಾಚರಣೆ ಮಾಡಲಾಯಿತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ನವೀನ್‍ಗೌಡ ಅವರು ಮಾದಕ ದ್ರವ್ಯದಿಂದಾಗುವ ದುಷ್ಪರಿಣಾಮ ಮತ್ತು ಅನಾಹುತಗಳ ಬಗ್ಗೆ ಆಟೋ ಚಾಲಕರು, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿಗಳಾದ ನಾಗರಾಜ್, ಲೋಕೇಶ್ ಮತ್ತಿತರರು ಇದ್ದರು.