ವೀರಾಜಪೇಟೆ, ಸೆ. 21: ವೀರಾಜಪೇಟೆ ಪಟ್ಟಣ ಪಂಚಾ ಯಿತಿಯ ಮುಖ್ಯಾಧಿಕಾರಿಯಾಗಿ ಶ್ರೀಧರ್ ಅವರು ಇಂದು ಅಧಿಕಾರ ವಹಿಸಿಕೊಂಡರು. ವೀರಾಜಪೇಟೆ ಯಲ್ಲಿ ಮುಖ್ಯಾಧಿಕಾರಿಯಾಗಿದ್ದ ಕೃಷ್ಣ ಪ್ರಸಾದ್ ಅವರು ನಾಗಮಂಗಲ ಪಟ್ಟಣ ಪಂಚಾಯಿತಿಗೆ ವರ್ಗವಾದ ನಂತರ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ಅವರು ಮುಖ್ಯಾಧಿಕಾರಿಯಾಗಿ ಆರು ತಿಂಗಳ ಕಾಲ ಕಾರ್ಯ ನಿರ್ವಹಿಸಿ ಈಗ ಅವರ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಶ್ರೀಧರ್ ಅವರು ಈ ಹಿಂದೆ ಕುಶಾಲನಗರದಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಕುಶಾಲನಗರ: ಕುಶಾಲನಗರ ಪ.ಪಂ. ನೂತನ ಮುಖ್ಯಾಧಿಕಾರಿಯಾಗಿ ಸುಜಯ್‍ಕುಮಾರ್ ಎಂಬವರನ್ನು ಸರಕಾರ ನಿಯೋಜಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಮುಖ್ಯಾಧಿಕಾರಿಯಾಗಿದ್ದ ಎ.ಎಂ. ಶ್ರೀಧರ್ ಅವರನ್ನು ವೀರಾಜಪೇಟೆ ಪ.ಪಂ.ಗೆ ವರ್ಗಾಯಿಸಲಾಗಿದ್ದು ಅರಕಲಗೂಡಿನಲ್ಲಿ ಮುಖ್ಯಾಧಿಕಾರಿಯಾಗಿದ್ದ ಸುಜಯ್‍ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.