ನಾಪೆÉÇೀಕ್ಲು, ಸೆ. 21: ನಾಪೆÉÇೀಕ್ಲು ಗ್ರಾಹಕರ ಸಹಕಾರ ಸಂಘವು 2017-18 ನೇ ಸಾಲಿನಲ್ಲಿ 2,44,393 ರೂ. ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ ತಿಳಿಸಿದ್ದಾರೆ.

ನಾಪೆÇೀಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಸಂಘದ 85ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಸುಮಾರು 533 ಜನ ಸದಸ್ಯರಿದ್ದು, ಸಂಘವು ‘ಎ’ ತರಗತಿಯನ್ನು ಹೊಂದಿದೆ. ವ್ಯಾಪಾರದಲ್ಲಿ ವಾರ್ಷಿಕವಾಗಿ ಸುಮಾರು ರೂ. 10,22,368 ವಹಿವಾಟು ನಡೆಸುತ್ತಿದ್ದು, ರೂ. 1,63,778 ಲಾಭಗಳಿಸಿದೆ ಎಂದರು. ಸಂಘವು ಮೂರು ಬಾಡಿಗೆ ಮಳಿಗೆಯನ್ನು ಹೊಂದಿದೆ. ಮಾಸಿಕವಾಗಿ ರೂ. 44,500 ಬಾಡಿಗೆಯನ್ನು ವಸೂಲಿ ಮಾಡಲಾಗುತ್ತಿದೆ ಎಂದ ಅವರು ಪ್ರಸÀಕ್ತ ರೂ. 29,03,287 ಠೇವಣಿಯನ್ನು ಹೊಂದಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ನಾಟೋಳಂಡ ಕಸ್ತೂರಿ, ಕಾರ್ಯದರ್ಶಿ ಕಲ್ಲೇಂಗಡ ತಮ್ಮಿ ತಿಮ್ಮಯ್ಯ, ನಿರ್ದೇಶಕರಾದ ಕುಲ್ಲೇಟಿರ ಅರುಣ್ ಬೇಬ, ಕೊಂಬಂಡ ಗಣೇಶ್, ನಾಯಕಂಡ ಮುತ್ತಪ್ಪ, ಬೊಟ್ಟೋಳಂಡ ಸೋಮಯ್ಯ, ಕೇಟೋಳಿರ ಮುತ್ತಮ್ಮ, ನಾಯಕಂಡ ದೀಪು ಚಂಗಪ್ಪ, ಎಂ.ಎಸ್. ಮಹಮ್ಮದ್ ಅಲಿ, ಹೆಚ್.ಎ. ಬೊಳ್ಳು, ಸಿಬ್ಬಂದಿಗಳಾದ ತಟ್ಟಂಡ ರವಿ ಮುತ್ತಪ್ಪ, ಎಂ.ಕೆ. ರಾಜಪ್ಪ ಇದ್ದರು.