ಮಡಿಕೇರಿ, ಸೆ. 21: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಪ್ರಾಯೋಜಕತ್ವದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರೋಟರ್ಯಾಕ್ಟ್ ಕ್ಲಬ್ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾಲೇಜಿನ ಪ್ರಾಶುಂಪಾಲೆ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನುಸ್ಥಾಪನಾ ಅಧ್ಯಕ್ಷರಾಗಿ ರೊ. ಬಿ.ಕೆ .ರವೀಂದ್ರ ರೈ, ಮಿಸ್ಟಿ ಹಿಲ್ಸ್ ಅಧ್ಯಕ್ಷ ಜಿ.ಆರ್. ರವಿಶಂಕರ್, ಕಾರ್ಯದರ್ಶಿ ಮಹೇಶ್, ರೋಟರ್ಯಾಕ್ಟ್ ವಿಭಾಗದ ಮುಖ್ಯಸ್ಥ ಧನಂಜಯ್ ಮತ್ತಿತರು ಪಾಲ್ಗೊಂಡಿದ್ದರು. ಕ್ಲಬ್‍ನ ಅಧ್ಯಕ್ಷರಾಗಿ ಕೆ.ಎ. ಅಲೆನ್, ಕಾರ್ಯದರ್ಶಿಯಾಗಿ ಲಿಪಿಶ್ರೀ, ಉಪಾಧ್ಯಕ್ಷರಾಗಿ ಎಂ.ಎ. ಸಫ್ರೀನ, ಜಂಟಿ ಕಾರ್ಯದರ್ಶಿಯಾಗಿ ಸಬ ಸಮ್ರೀನ್, ಖಜಾಂಚಿಯಾಗಿ ಜಿಸ್ಮ ರೆಜಿನ, ಸಾರ್ಜೆಂಟ್ ಆಗಿ ಯಕ್ಷಿತ್, ನಿರ್ದೇಶಕರಾಗಿ ರೀಮಾ ತಂಜಿûಯ, ಸೋನಿಯಾ ಜ್ಯಾಕ್‍ಲೀನ್, ಮಹಮ್ಮದ್ ಸುಹೇಲ್, ಜೀನ್ ಸಲೋನಿ ಇವರುಗಳು ಪದಗ್ರಹಣ ಸ್ವೀಕರಿಸಿದ್ದಾರೆ.