ಮಡಿಕೇರಿ, ಸೆ. 21: ಒಟ್ಟು 3648 ಸದಸ್ಯರೊಂದಿಗೆ ರೂ. 283.49 ಲಕ್ಷ ಪಾಲು ಬಂಡವಾಳವನ್ನು ಹೊಂದಿರುವ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2017-18ನೇ ಸಾಲಿನಲ್ಲಿ ರೂ. 20.31 ಲಕ್ಷ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 5 ರಷ್ಟು ಡಿವಿಡೆಂಡ್ ಘೋಷಣೆ ಮಾಡಿದೆ.

ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ಅವರು ಸಂಘದ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಸರಕಾರದ ನಿರ್ದೇಶನದಂತೆ ಪೆರಾಜೆ ಶಾಖೆಯನ್ನು ಪ್ರತ್ಯೇಕಗೊಳಿಸಿ 1365 ಸದಸ್ಯರು ಮತ್ತು ಪಾಲು ಬಂಡವಾಳ ರೂ. 123.36 ಲಕ್ಷಗಳನ್ನು ಪ್ರತ್ಯೇಕಿಸಿ ನೂತನ ಪೆರಾಜೆ ಪ್ರಾಥಮಿಕ ಕೃ.ಪ.ಸ. ಸಂಘಕ್ಕೆ ವರ್ಗಾಯಿಸಲಾಗಿದೆ. ಪ್ರಸ್ತುತ ಸಂಘದಲ್ಲಿ 2283 ಸದಸ್ಯರು ಹಾಗೂ ರೂ. 160.24 ಲಕ್ಷ ಪಾಲು ಬಂಡವಾಳ ಇರುತ್ತದೆ.

ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೇ. 5 ಡಿವಿಡೆಂಡ್ ಹಂಚಿಕೆ ಮಾಡುತ್ತಿರುವದಕ್ಕೆ ಸಭೆಯಲ್ಲಿ ಅಭಿನಂದನೆ ವ್ಯಕ್ತವಾಯಿತು. ಶೇ. 5 ಡಿವಿಡೆಂಡ್‍ನಲ್ಲಿ ಶೇ. 2.5 ವನ್ನು ನೆರೆ ಸಂತ್ರಸ್ತರಿಗೆ ವಿತರಿಸುವಂತೆ,

ಬಂಡವಾಳ ಇರುತ್ತದೆ.

ಸದಸ್ಯರಿಗೆ ಪಾಲು ಬಂಡವಾಳದ ಮೇಲೆ ಶೇ. 5 ಡಿವಿಡೆಂಡ್ ಹಂಚಿಕೆ ಮಾಡುತ್ತಿರುವದಕ್ಕೆ ಸಭೆಯಲ್ಲಿ ಅಭಿನಂದನೆ ವ್ಯಕ್ತವಾಯಿತು. ಶೇ. 5 ಡಿವಿಡೆಂಡ್‍ನಲ್ಲಿ ಶೇ. 2.5 ವನ್ನು ನೆರೆ ಸಂತ್ರಸ್ತರಿಗೆ ವಿತರಿಸುವಂತೆ, ಉಜಿರೆ ರಬ್ಬರ್ ಸೊಸ್ಯೆಟಿಯ ಮುಖಾಂತರ ರಬ್ಬರ್ ಖರೀಧಿಸುವಂತೆ ಕಾಳುಮೆಣಸನ್ನು ಸಹ ಖರೀಧಿಸಲು ಕಾರ್ಯ ಯೋಜನೆ ರೂಪಿಸಲಾಗುವದು ಎಂದರು.

ಸಂಘದ ಸಿಬ್ಬಂಧಿ ರೇಣುಕಾಕ್ಷ ಬಿ.ಸಿ. ಪ್ರಾರ್ಥಿಸಿದರು. ಮುಖ್ಯ ಕಾರ್ಯನಿರ್ಹವಣಾ ಅಧಿಕಾರಿ ಆನಂದ ಬಿ.ಕೆ. ಮಹಾಸಭೆಯ ವರದಿಯನ್ನು ಓದಿ ರೆಕಾರ್ಡ್ ಮಾಡಿದರು. ಸಂಘದ ಉಪಾಧ್ಯಕ್ಷ ದಯಾನಂದ ಪನೇಡ್ಕ ವಂದನಾರ್ಪಣೆ ಸಲ್ಲಿಸಿದರು. ನಿರ್ದೇಶಕರಾದ ತೀರ್ಥಪ್ರಸಾದ್ ಕೊಯನಾಡು, ಪಕೀರ, ರಮಾನಂದ ಬಾಳೆಕಜೆ, ದಿನೇಶ ಸಣ್ಣಮನೆ, ಶ್ರೀಕಾಂತ್ ಕೆದಂಬಾಡಿ, ಮನೋರಮಾ ಬೋಳ್ತಾಜೆ, ರೇವತಿ ಹೊನ್ನಪ್ಪ ಕಾಸ್ಪಾಡಿ, ಆಂತರಿಕ ಲೆಕ್ಕಪರಿಶೋಧಕ ರತ್ನಾಕರ ಬಳ್ಳಡ್ಕ ಮತ್ತು ಸಂಘದ 900ಕ್ಕೂ ಹೆಚ್ಚು ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.