ಸುಂಟಿಕೊಪ್ಪ, ಸೆ. 21: ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಪ್ರೌಢಶಾಲಾ ಬಾಲಕರ ತಂಡ ಹಾಗೂ ಪ್ರಾಥಮಿಕ ಶಾಲಾ ಬಾಲಕರ ತಂಡವು ಜಯಗಳಿಸುವ ಮೂಲಕ ಮಂಗಳೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟಕ್ಕೆ ಆಯ್ಕೆ ಗೊಂಡಿದ್ದಾರೆ.

ಮಡಿಕೇರಿಯ ಸಂತ ಜೋಸೆಫ್ ಶಾಲಾ ಮೈದಾನದಲ್ಲಿ ಪ್ರಾಥಮಿಕ ಶಾಲಾ ಬಾಲಕರ ವಿಭಾಗ ಹಾಗೂ ಪ್ರೌಢಶಾಲಾ ಬಾಲಕರ ವಿಭಾಗದ ಜಿಲ್ಲಾ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಪ್ರೌಢಶಾಲಾ ಬಾಲಕರ ಫೈನಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಲಯನ್ಸ್ ಪ್ರೌಢಶಾಲೆ ಹಾಗೂ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ತಂಡಗಳ ನಡುವೆ ನೇರ ಹಣಾಹಣಿ ನಡೆದು ಸುಂಟಿಕೊಪ್ಪ ಪ್ರೌಢಶಾಲಾ ಬಾಲಕರ ತಂಡವು ಪಂದ್ಯಾವಳಿಯಲ್ಲಿ 16-04 ಅಂಕಗಳನ್ನು ಗಳಿಸುವ ಮೂಲಕ ಗೋಣಿಕೊಪ್ಪ ಲಯನ್ಸ್ ಪ್ರೌಢಶಾಲೆ ತಂಡವನ್ನು ಮಣಿಸಿ ಜಿಲ್ಲಾ ಪ್ರಶಸ್ತಿಯೊಂದಿಗೆ ವಿಭಾಗೀಯ ಮಟ್ಟಕ್ಕೆ ಆರ್ಹತೆಯನ್ನು ಪಡೆದು ಕೊಂಡಿತು.

ಸುಂಟಿಕೊಪ್ಪ ಪ್ರೌಢÀಶಾಲೆಯ ವ್ಯವಸ್ಥಾಪಕ ಎಡ್ವರ್ಡ್ ವಿಲಿಯಂ ಸಲ್ಡಾನ, ತರಬೇತುದಾರ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಇದ್ದರು.

ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ತಂಡವು ಗೋಣಿಕೊಪ್ಪದ ಲಯನ್ಸ್ ಪ್ರಾಥಮಿಕ ಶಾಲಾ ತಂಡದೊಂದಿಗೆ ಪಂದ್ಯಾವಳಿಯು ನಡೆದಿದ್ದು 2 ತಂಡಗಳ ನಡುವೆ ಪೈಪೋಟಿ ಏರ್ಪಾಟ್ಟು ಕೊನೆಯಲ್ಲಿ 12-09 ಅಂಕಗಳಿಂದ ಸುಂಟಿಕೊಪ್ಪ ಸಂತ ಮೇರಿ ತಂಡವು ಗೋಣಿಕೊಪ್ಪಲು ಲಯನ್ಸ್ ತಂಡವನ್ನು ಸೋಲಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಕಿಶೋರ್ ತಿಳಿಸಿದ್ದಾರೆ.