ಸೋಮವಾರಪೇಟೆ, ಸೆ. 21: ಸಂಘದ ಸದಸ್ಯರುಗಳ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಯೋಜನೆಗಳನ್ನು ರೂಪಿಸಿ, ಕಾರ್ಯಪ್ರವೃತ್ತವಾದ ಸಂಘವು ರೂ. 8 ಕೋಟಿ ಸಾಲ ವಿತರಿಸಿ, ಅದರಂತೆ ವಸೂಲಾತಿಯಲ್ಲೂ ಶೇ. 95ರಷ್ಟು ಸಾಧನೆ ಮಾಡಿದೆ ಎಂದು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ಶಿವಕುಮಾರ್ ಹೇಳಿದರು.

ಪಟ್ಟಣದ ಮಹಿಳಾ ಸಮಾಜ ದಲ್ಲಿ ಆಯೋಜಿಸಿದ್ದ ಸಂಘದ 49ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘದ ಧ್ಯೇಯೋದ್ದೇಶಗಳನ್ನು ಪಾಲಿಸುತ್ತಾ, ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘ ಎಂಬ ಕೀರ್ತಿಗೆ ಪಾತ್ರವಾಗಿದೆ. ಇದಕ್ಕೆ ಸಂಘದ ಸದಸ್ಯರುಗಳು, ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಅಧಿಕಾರ ವರ್ಗದವರ ಪ್ರಾಮಾಣಿಕ ಸೇವೆ ಕಾರಣವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸವಲತ್ತು ನೀಡುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ಸಂಘದ ಕಟ್ಟಡ ಕೃಷಿ ಪತ್ತಿನ ಸಹಾಕಾರ ಸಂಘದೊಂದಿಗೆ ಜಂಟಿಯಾಗಿ ನಿರ್ಮಿಸಲಾಗಿದೆ. ಮುೂರನೇ ಅಂತಸ್ತಿನಲ್ಲಿ ರೂ. 36 ಲಕ್ಷದ ಸಭಾಂಗಣ ನಿರ್ಮಿಸುವ ಯೋಜನೆಯಿದ್ದು, ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ಮಾತುಕತೆ ನಡೆದಿದೆ. ಸದಸ್ಯರಿಗೆ ಈಗಾಗಲೇ ಹಿಂದಿನ ಸಾಲಿನಲ್ಲಿ ಮರಣ ನಿಧಿ ಯೋಜನೆ ಜಾರಿಗೆ ವರ್ಗದವರ ಪ್ರಾಮಾಣಿಕ ಸೇವೆ ಕಾರಣವಾಗಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸವಲತ್ತು ನೀಡುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ಸಂಘದ ಕಟ್ಟಡ ಕೃಷಿ ಪತ್ತಿನ ಸಹಾಕಾರ ಸಂಘದೊಂದಿಗೆ ಜಂಟಿಯಾಗಿ ನಿರ್ಮಿಸಲಾಗಿದೆ. ಮುೂರನೇ ಅಂತಸ್ತಿನಲ್ಲಿ ರೂ. 36 ಲಕ್ಷದ ಸಭಾಂಗಣ ನಿರ್ಮಿಸುವ ಯೋಜನೆಯಿದ್ದು, ಕೃಷಿ ಪತ್ತಿನ ಸಹಕಾರ ಸಂಘದೊಂದಿಗೆ ಮಾತುಕತೆ ನಡೆದಿದೆ. ಸದಸ್ಯರಿಗೆ ಈಗಾಗಲೇ ಹಿಂದಿನ ಸಾಲಿನಲ್ಲಿ ಮರಣ ನಿಧಿ ಯೋಜನೆ ಜಾರಿಗೆ 5ರಷ್ಟನ್ನು ದೇಣಿಗೆ ನೀಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಹೆಚ್.ಕೆ. ಮಾದಪ್ಪ, ವರಲಕ್ಷ್ಮಿ ಸಿದ್ದೇಶ್ವರ್, ಶೋಭಾ ಶಿವರಾಜ್, ಬಿ. ಶಿವಪ್ಪ, ಶ್ರೀಕಾಂತ್, ಕೆ.ಬಿ. ಸುರೇಶ್, ಎಂ.ಸಿ. ರಾಘವ, ಬಿ.ಡಿ. ಮಂಜುನಾಥ್, ಬಿ.ಆರ್. ಮೃತ್ಯುಂಜಯ, ಹೆಚ್.ಎಸ್. ವೆಂಕಪ್ಪ, ಎನ್.ಟಿ. ಪರಮೇಶ್, ಕೆ.ಬಿ. ದಿವ್ಯ, ಸಂಘದ ಪ್ರಬಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಕೆ. ಮೋಹನ್, ಎಂ.ಬಿ. ತಾರಾ ಉಪಸ್ಥಿತರಿದ್ದರು.