ನಾಪೆÇೀಕ್ಲು, ಸೆ. 21: ಭಾಗಮಂಡಲ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಸಮಾರಂಭದಲ್ಲಿ ಹೋಬಳಿ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಎಂ.ಎಲ್. ಡೀನಾಗೆ ಪ್ರಶಸ್ತಿ ಪತ್ರ ನೀಡಿ ಶುಭ ಹಾರೈಸಲಾಯಿತು. ಕ್ರಿಡಾಕೂಟದ ವಿದ್ಯಾರ್ಥಿಗಳಿಗೆ 15 ಟೀಶರ್ಟ್ ನೀಡಿದ ಮಡಿಕೇರಿ ಅರುಣ್ ಸ್ಟೋರ್ಸ್ ಮಾಲೀಕ ಮತ್ತು ಒಂದು ಗ್ರೀನ್ ಬೋರ್ಡ್ ನೀಡಿದ ಮಡಿಕೇರಿ ಶೂ ಎಂಪೆÇೀರಿಯಂ ಮಾಲೀಕ ಹನೀಫ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿ ರಾಜೇಶ್, ಮುಖ್ಯ ಶಿಕ್ಷಕ ಎನ್.ಕೆ. ಪ್ರಭು, ದೈಹಿಕ ಶಿಕ್ಷಕಿ ಬಿ.ಪಿ. ಅರುಣ, ಶಾಲಾಭಿವೃದ್ಧಿ ಸಮಿತಿ, ಪೆÇೀಷಕರು ಇದ್ದರು.