ಸಿದ್ದಾಪುರ, ಸೆ. 21: ದಲಿತರು ಪ್ರಗತಿ ಹೊಂದಬೇಕಾದರೆ ವಿದ್ಯೆ ಮತ್ತು ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದಿವಾಕರ್ ಅಭಿಪ್ರಾಯಿಸಿದರು.

ಕೆಡಿಎಸ್‍ಎಸ್ ಸಮಿತಿಯ ನೆಲ್ಲಿಹುದಿಕೇರಿ ಗ್ರಾಮ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ವಿದ್ಯಾವಂತರಾಗುವದರ ಜೊತೆಗೆ ಸಂಘಟಿತರಾದರೆ ಮಾತ್ರ ಸರ್ಕಾರದ ಯೋಜನೆಗಳನ್ನು ಮತ್ತು ಮೀಸಲಾತಿಗಳನ್ನು ಕೇಳಿ ಪಡೆದುಕೊಳ್ಳಲು ಸಾಧ್ಯ ಎಂದರು. ಗ್ರಾ.ಪಂ. ಸದಸ್ಯ ಎ.ಕೆ. ಹಕೀಂ ದಲಿತರಿಗೆ ಸರ್ಕಾರದಿಂದ ದೊರೆಯುವ ಅನುದಾನಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ರವಿ, ವೀರಾಜಪೇಟೆ ತಾಲೂಕು ಸಮಿತಿ ಸಂಚಾಲಕ ವೆಂಕಟೇಶ್, ಪಾಲಿಬೆಟ್ಟ ಸಮಿತಿ ಸಂಚಾಲಕ ಬೈರಪ್ಪ ಮತ್ತು ಇತರರು ಇದ್ದರು.