ಕೂಡಿಗೆ, ಸೆ. 25: ಶಿರಂಗಾಲ ಪದವಿಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ಖೋ-ಖೋ ತಂಡಗಳು ಹಾಗೂ ಬಾಲಕರ ಥ್ರೋಬಾಲ್ ತಂಡ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುವ ಕ್ರೀಡಾಪಟುಗಳನ್ನು ಕಾಲೇಜು ಪ್ರಾಂಶುಪಾಲ ಹೆಚ್.ಜೆ. ನಾಗರಾಜ್, ಮಾರ್ಗದರ್ಶಿಸಿದ್ದರೆ, ತರಬೇತುದಾರರಾದ ಎಸ್.ಆರ್. ವೆಂಕಟೇಶ್, ವೀಣಾ ತರಬೇತಿ ನೀಡಿದ್ದರು.