ಕೂಡಿಗೆ, ಸೆ. 25 : ಇತ್ತೀಚೆಗೆ ವೀರಾಜಪೇಟೆ ಯಲ್ಲಿ ನಡೆದ ಪ್ರೌಢಶಾಲಾ ವಿಭಾಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೆ.ಎನ್.ನಮೀತ ಪ್ರಥಮ ಸ್ಥಾನ ಪಡೆದಿದ್ದಾಳೆ. ಪ್ರಥಮ ಸ್ಥಾನ ಪಡೆದಿರುವ ಈಕೆ ಗದಗ್‍ನಲ್ಲಿ ನಡೆಯುವ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾಳೆ.

ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆ.ಎನ್.ನಮೀತಗೆ ಪ್ರಮೋದ್ ತರಬೇತಿ ನೀಡಿದ್ದಾರೆ. ಕೆ.ಎನ್. ನಮೀತ ಮುಳ್ಳುಸೋಗೆಯ ಕುವೆಂಪು ಬಡಾವಣೆಯ ನಿವಾಸಿ ಶಾಲಿನಿ ನಂಜುಂಡಸ್ವಾಮಿ ದಂಪತಿಯ ಪುತ್ರಿ.