ಮಡಿಕೇರಿ, ಸೆ. 25: ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಭಯಂಕರವಾದ ಗೇಮ್ ಗೆ ಒಳಗಾಗಿ ಮಕ್ಕಳು ಆತ್ಮಹತ್ಯೆಗೆ ಪ್ರಯತ್ನಿಸಿರುವದರ ಬಗ್ಗೆ ವರದಿಯಾಗಿದೆ. ಈ ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಆಟವು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಖಾತೆಯನ್ನು ಹೊಂದಿದ್ದು ಪ್ರಾರಂಭದಲ್ಲಿ ಫೇಸ್‍ಬುಕ್‍ನಲ್ಲಿ ಆರಂಭವಾಗಿ ವಾಟ್ಸ್‍ಆಪ್ ಮೂಲಕ ವ್ಯಾಪಕವಾಗಿ ಹರಡಿರುತ್ತದೆ. ಆನ್‍ಲೈನ್ ಆಟವು ಅನಾಮಧೇಯ ಕರೆಗಳನ್ನು ಮಾಡಿ ಮಕ್ಕಳಿಗೆ ಈ ಆಟವನ್ನು ಆಡಲು ಪ್ರೇರಣೆ ನೀಡಿ ತನ್ನ ಪ್ರಭಾವಕ್ಕೆ ಒಳಪಡಿಸಿಕೊಳ್ಳುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಪೋಷಕರು ಹಾಗೂ ಶಾಲಾ ಕಾಲೇಜುಗಳಲ್ಲಿ ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಆಟವನ್ನು ಪೋಷಕರಿಗೆ ಎಸ್ಪಿ ಮನವಿ (ಮೊದಲ ಪುಟದಿಂದ) ಸಂಪೂರ್ಣವಾಗಿ ತಡೆಯಲು ಆನ್‍ಲೈನ್ ಆಟದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮೊಮೊ ಚಾಲೆಂಜ್ ಆನ್‍ಲೈನ್ ಗೇಮ್ ಎಂಬ ಆಟವನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪಣ್ಣೇಕರ್ ಅವರು ಕೋರಿದ್ದಾರೆ.