ಮೂರ್ನಾಡು, ಸೆ. 25: ಮಂಗಳವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಮೂರ್ನಾಡು ಪಟ್ಟಣದ ಸುತ್ತಮುತ್ತ ಮನೆ ಹಾಗೂ ವಿದ್ಯುತ್ ಕಂಬ ಹಾನಿಗೀಡಾಗಿವೆ.

ಬೆಳಗ್ಗಿನಿಂದ ಬಿರು ಬಿಸಿಲಿನಿಂದ ಕೂಡಿದ ವಾತಾವರಣ ಮಧ್ಯಾಹ್ನ ದಿಢೀರನೆ ಮೋಡ ಕವಿದುಕೊಂಡು ಗುಡುಗು, ಮಿಂಚು ಹಾಗೂ ಗಾಳಿಯೊಂದಿಗೆ ಸುರಿದ ಮಳೆಗೆ ಕಾಂತೂರು ನಿವಾಸಿ ಕೆ.ಕೆ. ಸುಚ್ಚಿ ಕುಮಾರ್ ಅವರ ವಾಸದ ಮನೆಯ ಆರ್‍ಸಿಸಿ ಮೇಲ್ಬಾಗದಲ್ಲಿ ಹಾಕಲಾದ ಜಿಂಗ್ ಸೀಟ್‍ಗಳು ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಲೈನ್ ಮನೆಯ ಮೇಲೆ ತೆಂಗಿನ ಮರ ಮುರಿದು ಬಿದ್ದು ಹೆಂಚುಗಳು ಹೊಡೆದು ನಷ್ಟವಾಗಿದೆ. ಮೂರ್ನಾಡು ಕೊಂಡಂಗೇರಿ ರಸ್ತೆಯಲ್ಲಿ ಭರತ್ ಅವರ ಅಡಿಕೆ ಮಂಡಿ ಬಳಿ ರಸ್ತೆ ಬದಿ ಇದ್ದ ವಿದ್ಯುತ್ ಕಂಬ ರಸ್ತೆಗೆ ಉರುಳಿ ಕೆಲ ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.