ಸೋಮವಾರಪೇಟೆ, ಸೆ. 25: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮರಗೋಡಿನಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಇಲ್ಲಿನ ಓಎಲ್‍ವಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಶಾಲೆಯ 10ನೇ ತರಗತಿ ವಿದ್ಯಾರ್ಥಿ ರವಿವರ್ಮ ಚೆಸ್ ಸ್ಪರ್ಧೆಯಲ್ಲಿ, ಚಿರಾಗ್ ಶೆಟ್ಟಿ ಉದ್ದಜಿಗಿತ, ಎವಿನ್ ಸೆಬಾಸ್ಟಿನ್ ಗುಂಡು ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯಶಿಕ್ಷಕಿ ಸೆರಿನ್, ಶಿಕ್ಷಕ ದಿನೇಶ್, ದೈಹಿಕ ಶಿಕ್ಷಕ ಲಿಂಗರಾಜು ಅವರುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.