ಗೋಣಿಕೊಪ್ಪ, ಸೆ. 25: ಮಂಗಳೂರು ಸೆಂಟ್ ಅಲೋಷಿಯಸ್ ಕಾಲೇಜಿನ ಪದವಿ ವಿದ್ಯಾರ್ಥಿಗಳು ಭೂಕುಸಿತವಾಗಿರುವ ಮದೆನಾಡು ಗ್ರಾಮದಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿಕೊಳ್ಳುವ ಮೂಲಕ ಶ್ರಮದಾನ ಮಾಡಿದರು. ಜೋಡು ಪಾಲ, ಸಂಪಾಜೆ ಹಾಗೂ ಕಾಟಕೇರಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಸಂದರ್ಭ ಕೆಲಸದವರೊಂದಿಗೆ ಸಹಕರಿಸಿದರು. ಮರಳು ಹೊತ್ತು ಕೊಡುವ ಮೂಲಕ ರಸ್ತೆ ನಿರ್ಮಾಣದಲ್ಲಿ ತೊಡಗಿಕೊಂಡರು. ಸುಮಾರು 52 ವಿದ್ಯಾರ್ಥಿಗಳು ಶ್ರಮದಾನ ಮಾಡಿದರು.