ಮಡಿಕೇರಿ, ಸೆ. 26: ಪ್ರಸಕ್ತ ಸಾಲಿನ ಗ್ರಾಮೀಣ ಮಟ್ಟದ ಪ್ರೌಢ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ತಂತ್ರಜ್ಞಾನ ರಸಪ್ರಶ್ನೆ (ಐ.ಟಿ.ಕ್ವಿಜ್) ಕಾರ್ಯಕ್ರಮ ತಾ. 27 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.

ಶಾಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಭಾಗವಹಿಸಲು ಪ್ರಾಂಶುಪಾಲರು-ಮುಖ್ಯ ಶಿಕ್ಷಕರು ಸೂಕ್ತ ಕ್ರಮವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.