ಸೋಮವಾರಪೇಟೆ, ಸೆ. 26: ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 77.52 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ತಿಳಿಸಿದರು.
ಗೌಡಳ್ಳಿ ಬಿ.ಜಿ.ಎಸ್. ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸದಸ್ಯರಿಗೆ ಶೇ. 20 ರಷ್ಟು ಡಿವಿಡೆಂಡ್ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ನೀಡುವ ಡಿವಿಡೆಂಡ್ನಲ್ಲಿ ಶೇ. 6 ರಷ್ಟು, ರೂ. 3.30 ಲಕ್ಷ ಹಾಗೂ ಸಹಕಾರ ಸಂಘದ ಧರ್ಮಾರ್ಥ ನಿಧಿಯಿಂದ ರೂ. 2 ಲಕ್ಷ ಸೇರಿಸಿ ಒಟ್ಟು ರೂ. 5.30 ಲಕ್ಷಗಳನ್ನು ಜಿಲ್ಲೆಯ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೀಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
2018-19ನೇ ಸಾಲಿನ ರೂ. 1,55,75,000 ಅಂದಾಜು ಆಯ-ವ್ಯಯ ಪತ್ರವನ್ನು ಮಂಡಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಹೆಚ್.ಆರ್. ಸುರೇಶ್, ನಿರ್ದೇಶಕರುಗಳಾದ ಕೆ.ಟಿ. ಕಾವೇರಿ, ಸಿ.ಎ. ಮಮತ, ಜಿ.ಜೆ. ಪವಿತ್ರ, ಎಸ್.ಆರ್. ಷಡಾಕ್ಷರಿ, ಎಸ್.ಎ. ಸುರೇಶ್, ಜಿ.ಎ. ಮಹೇಶ್, ಜಿ.ಪಿ. ಸುನೀಲ್ ಕುಮಾರ್, ಎಸ್.ಕೆ. ಕೃಷ್ಣ, ಕೆ.ಡಿ.ಸಿ.ಸಿ. ಬ್ಯಾಂಕ್ನ ಮೇಲ್ವಿಚಾರಕ ಎಂ.ಜೆ. ಜಯಪ್ರಕಾಶ್, ಸಂಘದ ಸಿ.ಇ.ಓ. ಎನ್.ಎಸ್. ಪರಮೇಶ್, ಲೆಕ್ಕಿಗರಾದ ಕೆ.ಕೆ. ಶಿವಪ್ರಕಾಶ್ ಉಪಸ್ಥಿತರಿದ್ದರು.