ಮಡಿಕೇರಿ, ಸೆ. 26: ಟಿ.ಡಿ.ಎಸ್ ಪ್ರಾಧಿಕಾರ, ವೇತನ ಸೆಳೆಯುವ ಅಧಿಕಾರಿಗಳಿಗೆ ತಾ. 27 ರಂದು (ಇಂದು) ಅಪರಾಹ್ನ 2.30 ರಿಂದ ಸಂಜೆ 5 ಗಂಟೆವರೆಗೆ ವಿಶೇಷ ಜಿಎಸ್‍ಟಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯ ಟಿಡಿಎಸ್ ಪ್ರಾಧಿಕಾರ, ವೇತನ ಸೆಳೆಯುವ ಅಧಿಕಾರಿಗಳು ತಮ್ಮ ಕಚೇರಿಯ ಸಂಬಂಧಪಟ್ಟ ಸಿಬ್ಬಂದಿಯೊಂದಿಗೆ ಕಾರ್ಯಾಗಾರ ದಲ್ಲಿ ಭಾಗವಹಿಸುವಂತೆ ಮಡಿಕೇರಿ ಹಾಗೂ ವೀರಾಜಪೇಟೆ ಜಿಎಸ್‍ಟಿ ಅಧಿಕಾರಿಗಳು ತಿಳಿಸಿದ್ದು, ಕಾರ್ಯಾಗಾರದಲ್ಲಿ ಜಿಎಸ್‍ಟಿ ಕಾಯ್ದೆಯಡಿ ಟಿಡಿಎಸ್ ಕುರಿತಾದ ನೀತಿ ನಿಯಮಗಳು ಹಾಗೂ ಖಜಾನೆ-IIರಲ್ಲಿ ಪಾವತಿಸುವ ವಿಧಾನವನ್ನು ತಿಳಿಸಿಕೊಡಲಾಗುವದು.

ವಿಶೇಷ ಕಾರ್ಯಾಗಾರವನ್ನು ಮಡಿಕೇರಿ ಕೈಗಾರಿಕಾ ಬಡಾವಣೆಯಲ್ಲಿರುವ ಕಾವೇರಿ ಹಾಲ್‍ನಲ್ಲಿ ಆಯೋಜಿಸ ಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.