ಬಿ.ಎಸ್. ಲೋಕೇಶ್ಸಾಗರ್
ಕೂಡಿಗೆ, ಸೆ. 26: ಸುಮಾರು ಎರಡು ಸಾವಿರಕ್ಕೂ ಹೆಚ್ಚು ಇತಿಹಾಸವಿರುವ ಸ್ವತಃ ಲಿಪಿ ಹೊಂದಿರುವ ಒಂದು ವಸ್ತುವಿಗೆ ಹಲವಾರು ಪದಗಳಿಂದ ಕರೆಸಿಕೊಳ್ಳಲು ಸಾಮಥ್ರ್ಯವಿರುವ ಏಕೈಕ ಭಾಷೆ ಕನ್ನಡ ಭಾಷೆ. ಆದ್ದರಿಂದ ಸಿಇಟಿ ಪರೀಕ್ಷೆ, ವೈದ್ಯಕೀಯ ಶಿಕ್ಷಣ ಹಾಗೂ ತಾಂತ್ರೀಕ ಶಿಕ್ಷಣಗಳ ಪಠ್ಯ ಪುಸ್ತಕಗಳು ಕನ್ನಡ ಭಾಷೆಯಲ್ಲಿಯೂ ಇರಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಆಗ್ರಹಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಶಾಲನಗರ ಹೋಬಳಿ ಘಟಕದ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ದಿ. ಟಿ.ಕೆ. ಸುಬ್ಬರಾವ್ ದತ್ತಿ ಹಾಗೂ ವಿಶ್ವಮುಖಿ ಭಾರತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸುಮಾರು 6 ಕೋಟಿಗೂ ಮಿಗಿಲಾಗಿ ಜನಸಂಖ್ಯೆ ಇರುವ ಅಖಂಡ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದ ಕನ್ನಡಿಗರೇ ಹೆಚ್ಚಿದ್ದು, ಗ್ರಾಮೀಣ ಭಾಗದಲ್ಲಿ ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿಯೇ ಹೆಚ್ಚು ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉನ್ನತ ಮಟ್ಟದ ಶಿಕ್ಷಣಗಳನ್ನು ಕನ್ನಡದಲ್ಲಿಯೂ ಇರುವಂತೆ ಮಾಡಬೇಕು ಎಂದರು. ಕಾರ್ಯಕ್ರಮ ವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಬಸವರಾಜಶೆಟ್ಟಿ ಉದ್ಘಾಟಿಸಿದರು. ಕಾನ್ಬೈಲ್ ಶಾಲಾ ಶಿಕ್ಷಕಿ ಎಂ.ಕೆ. ಮಾಲಾದೇವಿ ಅವರು ‘ಕನ್ನಡ ಸಾಹಿತ್ಯದಲ್ಲಿ ಕೊಡಗು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭ ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಶಿಕ್ಷಕ ವೆಂಕಟ್ನಾಯ್ಕ, ಸಾರಿಗೆ ಸಂಸ್ಥೆಯ ಉದ್ಯೋಗಿ ಉಮೇಶ್ ಭಟ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಹೋಬಳಿ ಘಟಕದ ಕಾರ್ಯದರ್ಶಿ ದಿನೇಶಾಚಾರಿ, ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ತನುಕುಮಾರ್, ಉಪನ್ಯಾಸಕರಾದ ಗಣೇಶ್, ಕವಿತ, ಲೋಕೇಶ್, ಭೋಜೇಗೌಡ, ಮುತ್ತಣ್ಣನವರ್, ಯೋಗೇಶ್, ರೇಣುಕಸ್ವಾಮಿ ಇದ್ದರು.