ಮಡಿಕೇರಿ, ಸೆ. 26: ಕೆನರಾ ಬ್ಯಾಂಕ್ ವತಿಯಿಂದ ಇತ್ತೀಚೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬ್ಯಾಂಕ್ ಸಿಬ್ಬಂದಿಗಳ ಒಂದು ದಿನದ ವೇತನ ರೂ. 2 ಕೋಟಿ ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಕೆನರಾ ಬ್ಯಾಂಕ್ ಚೇರ್ಮನ್ ಮನೋಹರನ್, ಕಾರ್ಯಪಾಲಕ ನಿರ್ದೇಶಕಿ ಪಿ.ವಿ. ಭಾರತಿ, ಮಂಗಳೂರು ವೃತ್ತದ ಮಹಾ ನಿರ್ದೇಶಕ ಲಕ್ಷ್ಮಿನಾರಾಯಣ ಹಾಗೂ ಕೊಡಗು ಕ್ಷೇತ್ರ ಕಚೇರಿಯ ಮುಖ್ಯಸ್ಥ ವಿ.ಜೆ. ಅರುಣ ಇದ್ದರು.