ಶ್ರೀಮಂಗಲ, ಸೆ. 26: ಮರಗೋಡುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಪೆಮ್ಮಣಮಾಡ ನಿಶಾ ನೀಲಮ್ಮ ಡಿಸ್ಕಸ್ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪೊನ್ನಂಪೇಟೆಯ ಸೆಂಟ್ ಅಂಥೋಣಿ ಶಾಲೆಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಿಶಾ ನೀಲಮ್ಮ ಹರಿಹರ ಗ್ರಾಮದ ಪೆಮ್ಮಣಮಾಡ ಎಸ್. ಸತೀಶ್ ಮತ್ತು ರಶ್ಮಿ ದಂಪತಿಯ ಪುತ್ರಿ.