ಗೋಣಿಕೊಪ್ಪ ವರದಿ, ಸೆ. 26: ರಾಷ್ಟ್ರೀಯ ಹಿಂದಿ ದಿನಾಚರಣೆ ಪ್ರಯುಕ್ತ ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರೀ ಯೂನಿವರ್ಸಿಟಿ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯ ಬಗ್ಗೆ ದೇಶಭಕ್ತಿ ಗೀತೆ ಹಾಗೂ ಆಶುಭಾಷಣ ಸ್ಪರ್ಧೆ ನಡೆಯಿತು. ದೇಶಭಕ್ತಿ ಗೀತೆಯ ವೈಯಕ್ತಿಕ ವಿಭಾಗದಲ್ಲಿ ಬಿಶಿತ್ ಸೋಮಯ್ಯ ಪ್ರಥಮ, ಚೈನ್ಸಿ ದ್ವಿತೀಯ, ಗುಂಪು ವಿಭಾಗದಲ್ಲಿ ದ್ವಿತೀಯ ಪುಯಿಸಿ ತಂಡ ಪ್ರಥಮ, ಧನ್ಯ ಗಣಪತಿ ತಂಡ ದ್ವಿತೀಯ, ಆಶುಭಾಷಣದಲ್ಲಿ ಸಿಂಚನ ಪ್ರಥಮ, ದಿಯಾ ದ್ವಿತೀಯ ಸ್ಥಾನ ಪಡೆದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಸಣ್ಣುವಂಡ ರೋಹಿಣಿ ತಿಮ್ಮಯ್ಯ ಮಾತನಾಡಿ, ಹಿಂದಿ ಭಾಷೆ ಮಹತ್ವದಿಂದಾಗುವ ಬದಲಾವಣೆ, ಭಾಷೆಯ ಪೋಷಣೆ ಬಗ್ಗೆ ಸಲಹೆ ನೀಡಿದರು. ವಿದ್ಯಾರ್ಥಿನಿ ಪ್ರಕೃತಿ ಹಿಂದಿ ಭಾಷೆಯಿಂದಾಗುವ ಅಭಿವೃದ್ದಿ, ಭಾಷೆಯ ಪ್ರಾಧಾನ್ಯತೆ ಬಗ್ಗೆ ಜಾಗೃತಿ ಮೂಡಿಸಲು ವಿಷಯ ಮಂಡನೆ ಮಾಡಿದರು.