ಮಡಿಕೇರಿ, ಸೆ. 30: ಕಾಡಾನೆ ಧಾಳಿಯಿಂದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಬೆಳಗ್ಗೆ ಕೊಡ್ಲಿಪೇಟೆ ಸಮಿಪದ ಕೆಳಕೊಡ್ಲಿ ಗ್ರಾಮದಲ್ಲಿ ನಡೆದಿದೆ. ಸತೀಶ್ ಎಂಬವರೇ ಕಾಡಾನೆ ಧಾಳಿಯಿಂದ ಗಾಯಗೊಂಡ ವ್ಯಕ್ತಿ.ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಎಂದಿನಂತೆ ಮನೆ ಸಮಿಪದಲ್ಲಿರುವ ತಮ್ಮ ಕಾಫಿತೋಟಕ್ಕೆ ಬೈಕ್‍ನಲ್ಲಿ ಹೋಗುತ್ತಿದ್ದಾಗ ರಸ್ತೆ ಬದಿಯ ಅರಣ್ಯದಲ್ಲಿದ್ದ ಸುಮಾರು 9 ಕಾಡಾನೆ ಹಿಂಡಿನಲ್ಲಿದ್ದ ಸಲಗವೊಂದು, ಅಟ್ಟಿಸಿಕೊಂಡು ಬಂದಿದೆ, ಹಠಾತ್ತಾಗಿ ಕಾಡಾನೆ ಅಟ್ಟಿಸಿಕೊಂಡು ಬರುತ್ತಿರುವದನ್ನು ಗಮನಿಸಿದ ಸತೀಶ್, ಗಾಬರಿಗೊಂಡು ಬೈಕ್ ಸಮೇತ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದಾರೆ. ಈ ವೇಳೆ ಕಾಡಾನೆ ಸತೀಶ್ ಮೇಲೆ ಧಾಳಿ ಮುಂದುವರಿಸುವಷ್ಟರಲ್ಲಿ ಗ್ರಾಮಸ್ಥರು ಜೋರಾಗಿ ಬೊಬ್ಬೆ ಹಾಕಿದ್ದಾರೆ. ಅಷ್ಟರಲ್ಲಿ

(ಮೊದಲ ಪುಟದಿಂದ) ಕಾಡಾನೆ ಪಕ್ಕದ ಕಾಡಿನೊಳಗೆ ಹೋಗಿದೆ ಎಂದು ಘಟನೆ ಕುರಿತು ಪ್ರತ್ಯಕ್ಷÀದರ್ಶಿಗಳು ಹೇಳಿದರು. ಸತೀಶ್ ಅವರ ಸೊಂಟ ಮತ್ತು ಹೆಗಲಿನ ಭಾಗಕ್ಕೆ ಗಂಭೀರವಾದ ಗಾಯವಾಗಿದೆ, ಗ್ರಾಮಸ್ಥರು ಗಾಯಾಳು ಸತೀಶ್‍ಗೆ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವಾರದ ಹಿಂದೆ ಪಕ್ಕದ ಸಕಲೇಶಪುರದ ಯಸಳೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮರಿಯಾನೆಯೊಂದು ಮೃತಪಟ್ಟಿತ್ತು. ಈ ಸಂದರ್ಭದಲ್ಲಿ ಹತ್ತಾರು ಕಾಡಾನೆಗಳ ಹಿಂಡು ಅಲ್ಲಿ ಬೀಡುಬಿಟ್ಟಿತ್ತು, ಈಗ ಅದೇ ಕಾಡಾನೆಗಳ ಹಿಂಡು ಯಸಳೂರು ಮೀಸಲು ಅರಣ್ಯದಿಂದ ತೀರ ಸಮೀಪದಲ್ಲಿರುವ ಕಟ್ಟೆಪುರ ಅರಣ್ಯವನ್ನು ಸೇರಿಕೊಳ್ಳಲು ಬಂದಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶನಿವಾರಸಂತೆ ಆರ್‍ಎಫ್‍ಒ ಕೊಟ್ರೇಶ್ ಹಾಗೂ ಕೊಡ್ಲಿಪೇಟೆ ವಿಭಾಗದ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ದ್ದಾರೆ.

- ಸುರೇಶ್, ದಿನೇಶ್, ನರೇಶ್, ವಿಜಯ