ಸೋಮವಾರಪೇಟೆ, ಸೆ.30: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಅಂಗಡಿಯ ಮಾಲೀಕರೋರ್ವರ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ ನಿಲ್ದಾಣದ ಹಣ್ಣಿನ ಅಂಗಡಿಗೆ ಆಗಮಿಸಿದ ನವೀನ್ ಮತ್ತು ಸ್ನೇಹಿತರು, ಅಂಗಡಿ ಮಾಲೀಕ ದೇವರಾಜು ಅವರ ಮುಂದೆಯೇ ಸೇಬು ಹಣ್ಣನ್ನು ತೆಗೆದು ತಿನ್ನಲು ಮುಂದಾದ ಸಂದರ್ಭ ಮಾಲೀಕರು ಪ್ರಶ್ನಿಸಿದ್ದಾರೆ. ಈ ಸಂದರ್ಭ ಯುವಕರ ಗುಂಪು ತೂಕದ ಯಂತ್ರದಿಂದ ಭುಜದ ಭಾಗಕ್ಕೆ ತೀವ್ರ ಹಲ್ಲೆ ಮಾಡಿದ್ದು, ಪ್ರಕರಣದ ಕುರಿತು ಸೋಮವಾರಪೇಟೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಪ್ರತಿದೂರು ದಾಖಲು: ಹಣ್ಣಿನ ಅಂಗಡಿಯಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ದೇವರಾಜು ಮತ್ತು ಕುಟುಂಬದವರಾದ ಸಂಪತ್, ಉಮೇಶ್, ಸುರೇಶ್ ಅವರುಗಳು, ನವೀನ್ ಮತ್ತು ಕುಮಾರ್ ಅವರುಗಳ ಮೇಲೆ ಹಲ್ಲೆ ನಡೆಸಿದ ಪರಿಣಾಮ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಸೋಮವಾರಪೇಟೆಯ ನಯನ್ ರೈ ದೂರು ದಾಖಲಿಸಿದ್ದಾರೆ.